alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯ ಪಾಸ್ಪೋರ್ಟ್ ನಲ್ಲಿ 4200 ಮೈಲಿ ಪ್ರಯಾಣಿಸಿದ್ಲು ಮಹಿಳೆ

ಮಹಿಳೆಯೊಬ್ಬಳು ತನ್ನ ಪತಿಯ ಪಾಸ್ ಪೋರ್ಟ್ ಬಳಸಿಕೊಂಡು ಮ್ಯಾಂಚೆಸ್ಟರ್ ನಿಂದ ಭಾರತಕ್ಕೆ ಬಂದಿರುವ ಘಟನೆ ನಡೆದಿದೆ.

ಗೀತಾ ಮೋಧಾ ಎಂಬಾಕೆ ಬ್ಯುಸಿನೆಸ್ ಟ್ರಿಪ್ ಗಾಗಿ ಎಮಿರೇಟ್ಸ್ ವಿಮಾನದಲ್ಲಿ ಮ್ಯಾಂಚೆಸ್ಟರ್ ನಿಂದ ಹೊರಡುವಾಗ ಗಡಿಬಿಡಿಯಲ್ಲಿ ತನ್ನ ಪತಿ ದಿಲೀಪ್ ಪಾಸ್ ಪೋರ್ಟ್ ತಂದಿದ್ದಾಳೆ. ಆದರೆ ಅಲ್ಲಿನ ಸೆಕ್ಯುರಿಟಿ ಬಳಿಯಾಗಲಿ, ಡಾಕ್ಯುಮೆಂಟ್ಸ್ ಪರಿಶೀಲಿಸುವಾಗ ಎಲ್ಲಿಯೂ ಈ ಅಂಶ ಬೆಳಕಿಗೇ ಬಂದಿರಲಿಲ್ಲ.

ಅಲ್ಲದೇ, ದುಬೈ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿ ಬಂದರೂ ಪಾಸ್ ಪೋರ್ಟ್ ತೋರಿಸುವ ಸಂದರ್ಭವೇ ಬರಲಿಲ್ಲ. ಆದರೆ ಈ ಅಂಶ ಬೆಳಕಿಗೆ ಬಂದಿದ್ದು ಮಾತ್ರ ದೆಹಲಿ ಏರ್ ಪೋರ್ಟ್ ನಲ್ಲಿ.

ಕೊನೆಗೆ ಗೀತಾಳ ಮಗ ಆಕೆಯ ಪಾಸ್ ಪೋರ್ಟ್ ಅನ್ನು ಎಮಿರೇಟ್ಸ್ ಗೆ ತಂದು ಮುಟ್ಟಿಸಿದ ಬಳಿಕ ಪ್ರಕರಣ ಸುಖಾಂತ್ಯವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...