alex Certify
ಕನ್ನಡ ದುನಿಯಾ       Mobile App
       

Kannada Duniya

ಎಸ್.ಬಿ.ಐ. ನಲ್ಲಿ ಸಾಲ ಪಡೆದ 15 ಮಂದಿ 6 ತಿಂಗಳಲ್ಲಿ ಸತ್ರು…!

ತಮಿಳುನಾಡಿನಲ್ಲಿ ಕೋಟ್ಯಾಂತರ ರೂಪಾಯಿ ಸಾಲದ ಹಗರಣವೊಂದು ಬಹಿರಂಗವಾಗಿದೆ. ವಿರುದ್ಧನಗರ್ ಹಾಗೂ ಥೇಣಿ ಜಿಲ್ಲೆಯಲ್ಲಿ 60 ಕೋಟಿ ರೂಪಾಯಿ ಸಾಲಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿ ಹೊರಬಿದ್ದಿದೆ. ಸಾಲ ಪಡೆದ ನಂತ್ರ ಸಾಲ ಪಡೆದುಕೊಂಡವರು ಸಾವನ್ನಪ್ಪಿದ್ದಾರೆಂದು ದಾಖಲೆಯಲ್ಲಿ ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 6 ತಿಂಗಳಲ್ಲಿ ಸಾಲ ಪಡೆದುಕೊಂಡ ಸುಮಾರು 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ರೆ ಕೆಲವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಮೃತರಲ್ಲಿ ಬಹುತೇಕರು ವಿರುದ್ಧನಗರ್ ಜಿಲ್ಲೆಯವರು ಎನ್ನಲಾಗಿದೆ. ಇಬ್ಬರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ರೆ ಮತ್ತೆಲ್ಲರೂ ಮನೆಯಲ್ಲಿ ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದವರೆಲ್ಲ ಒಂದೇ ಕಡೆ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಪೊಲೀಸರು ಅವ್ರ ಮಾಲೀಕನನ್ನು ಬಂಧಿಸಿದ್ದಾರೆ. ಎಸ್.ಬಿ.ಐ. ಮಾಹಿತಿ ಪ್ರಕಾರ, 169 ಜನರಿಗೆ 25ರಿಂದ 40 ಲಕ್ಷದವರೆಗೆ ಮಾರುಕಟ್ಟೆ ಉತ್ಪನ್ನಗಳ ಖರೀದಿಗೆ ಸಾಲ ನೀಡಲಾಗಿತ್ತು. ಇದ್ರಲ್ಲಿ ಬಹುತೇಕರು ದಿನಗೂಲಿ ನೌಕರರಾಗಿದ್ದರಂತೆ. ಮಾಲೀಕರು ದಾಖಲೆಗೆ ಇವ್ರ ಸಹಿ ಪಡೆದು ಸಾಲ ಪಡೆದಿದ್ದರು. ಬ್ಯಾಂಕ್ ಸಾಲದ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿತ್ತು. ಜನರು ಅದನ್ನು ಖಾತೆಯಿಂದ ತೆಗೆದಿದ್ದರು ಎನ್ನಲಾಗಿದೆ. ಮಾಲೀಕರೆ ಸಾಲ ಪಡೆದವರ ಸಾವಿಗೆ ಕಾರಣವಾ ಎಂಬ ಸಂಶಯ ಮೂಡಿದ್ದು, ತನಿಖೆ ನಂತ್ರ ಸತ್ಯ ಹೊರಬರಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...