alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನ ವಿರುದ್ಧ ಮುನಿಸು ಹೊರಹಾಕಿದ ಮುಲಾಯಂ

mulayam_akhilesh_1491036945_749x421

ಉತ್ತರ ಪ್ರದೇಶ ಚುನಾವಣೆಯಲ್ಲಿ ಸೋಲುಂಡ ನಂತ್ರವೂ ಸಮಾಜವಾದಿ ಪಕ್ಷದ ಕುಟುಂಬ ಗಲಾಟೆ ಮುಂದುವರೆದಿದೆ. ಎಸ್ಪಿ ನಾಯಕ ಮುಲಾಯಂ ಸಿಂಗ್ ಯಾದವ್ ಮಾಜಿ ಸಿಎಂ, ಮಗ ಅಖಿಲೇಶ್ ಯಾದವ್ ವಿರುದ್ಧ ಮತ್ತೊಮ್ಮೆ ಕೆಂಡಕಾರಿದ್ದಾರೆ. ಮೈನ್ಪುರಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮುಲಾಯಂ ಸಿಂಗ್ ಯಾದವ್, ತಂದೆಗೇ ಆಗದವನು ಬೇರೆಯವರಿಗೆ ಆಗಲು ಹೇಗೆ ಸಾಧ್ಯ ಎಂದಿದ್ದಾರೆ.

ಹಿಂದೆ ಚುನಾವಣೆ ಗೆದ್ದ ನಂತ್ರ ಮಗ ಅಖಿಲೇಶ್ ಯಾದವ್ ರನ್ನು ಸಿಎಂ ಮಾಡ್ದೆ. ಆದ್ರೆ ಯಾರೂ ಮಾಡದ ಕೆಲಸವನ್ನು ಅಖಿಲೇಶ್ ಮಾಡಿದ್ರು. ಚಿಕ್ಕಪ್ಪನನ್ನೇ ಮಂತ್ರಿಮಂಡಲದಿಂದ ತೆಗೆದು ಹಾಕಿದ್ರು ಎಂದ ಮುಲಾಯಂ ಚುನಾವಣೆ ಸೋಲಿನ ಬಗ್ಗೆಯೂ ಮಾತನಾಡಿದ್ರು.

ಮುಲಾಯಂ ಸಿಂಗ್ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ನಂತ್ರ ಅಖಿಲೇಶ್ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಇದು ಮುಲಾಯಂ ಮುನಿಸಿಗೆ ಕಾರಣವಾಗಿತ್ತು. ಚುನಾವಣಾ ಪ್ರಚಾರದಲ್ಲೂ ಪಾಲ್ಗೊಳ್ಳದ ಮುಲಾಯಂ ಈಗ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...