alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೊಂದು ಸಾಧನೆ ಮಾಡಿದ ಮುಕೇಶ್ ಅಂಬಾನಿ ರಿಲಯನ್ಸ್ ಕಂಪನಿ

ವಿಶ್ವದ ಅತಿದೊಡ್ಡ 2 ಸಾವಿರ ಕಂಪನಿಗಳ ಪಟ್ಟಿಯಲ್ಲಿ ಭಾರತದ 57 ಕಂಪನಿಗಳು ಸೇರಿವೆ. ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ವಿಶ್ವದ ಅತಿದೊಡ್ಡ 200 ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಪ್ರತಿಷ್ಠಿತ ಫೋರ್ಬ್ಸ್ ಈ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಪೋರ್ಬ್ಸ್ ಬಿಡುಗಡೆ ಮಾಡಿದ ವಿಶ್ವದ ಅತಿದೊಡ್ಡ ಕಂಪನಿಗಳ ಪಟ್ಟಿಯಲ್ಲಿ ಚೀನಾದ ಐಸಿಬಿಸಿ ಮೊದಲ ಸ್ಥಾನದಲ್ಲಿದೆ. ಸತತ ಏಳನೇ ಬಾರಿ ಈ ಕಂಪನಿ ಅಗ್ರಸ್ಥಾನ ಕಾಯ್ದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ 71ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಎರಡು ಸಾವಿರ ಕಂಪನಿಗಳ ಪಟ್ಟಿಯಲ್ಲಿ ಭಾರತದ ಹೆಚ್ಡಿಎಫ್ಸಿ ಬ್ಯಾಂಕ್ 209ನೇ ಸ್ಥಾನದಲ್ಲಿದೆ. ಒಎನ್ಜಿಸಿ 220 ನೇ ಸ್ಥಾನದಲ್ಲಿದೆ.ಇಂಡಿಯನ್ ಆಯಿಲ್ 288 ಹಾಗೂ ಹೆಚ್ಡಿಎಫ್ಸಿ ಲಿಮಿಟೆಡ್ 332ನೇ ಸ್ಥಾನದಲ್ಲಿದೆ. ಟಿಸಿಎಸ್, ಐಸಿಐಸಿಐ ಬ್ಯಾಂಕ್, ಎಲ್ & ಟಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎನ್‌ಟಿಪಿಸಿ ಟಾಪ್ 500 ಕಂಪನಿಗಳ ಪಟ್ಟಿಯಲ್ಲಿ ಸೇರಿವೆ. ಈ ಪಟ್ಟಿಯಲ್ಲಿ 61 ದೇಶಗಳ ಕಂಪನಿಗಳಿವೆ.

 

 

Subscribe Newsletter

Get latest updates on your inbox...

Opinion Poll

  • ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಮುಂದುವರೆಯಲಿದೆಯಾ ದೋಸ್ತಿ ಸರ್ಕಾರ...?

    View Results

    Loading ... Loading ...