alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನಗಳಲ್ಲಿ ಬ್ಯುಸಿನೆಸ್ ಕ್ಲಾಸ್ ಸೀಟ್ ಗಾಗಿ ಸಂಸದರ ಪಟ್ಟು

ಎಕಾನಮಿ ಕ್ಲಾಸ್ ಟಿಕೆಟ್  ಬುಕ್ ಮಾಡಿದ್ದರೂ ವಿಮಾನಗಳಲ್ಲಿ ಸಂಸದರಿಗೆ ಬ್ಯುಸಿನೆಸ್ ಕ್ಲಾಸ್ ಗೆ ಅಪ್ ಗ್ರೇಡ್ ಮಾಡಬೇಕು ಅನ್ನೋ ವಾದ ಕೇಳಿಬಂದಿದೆ. ಡೊಮೆಸ್ಟಿಕ್ ಏರ್ ಲೈನ್ಸ್ ನ ಪ್ರೀಮಿಯಂ ಕ್ಯಾಬಿನ್ ನಲ್ಲಿ ಬ್ಯುಸಿನೆಸ್ ಕ್ಲಾಸ್ ಸೀಟ್ ಖಾಲಿ ಇದ್ದಲ್ಲಿ ಅದನ್ನು ಸಂಸದರಿಗೆ ಕೊಡಬೇಕು ಅಂತಾ ಗ್ರಾಹಕ ವ್ಯವಹಾರಗಳ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.

ಈ ಸಂಬಂಧ ಡೊಮೆಸ್ಟಿಕ್ ಏರ್ ಲೈನ್ಸ್ ಗೆ ಸೂಚನೆ ನೀಡುವಂತೆ ಟಿಡಿಪಿ ಎಂಪಿ ಜೆಸಿ ದಿವಾಕರ ರೆಡ್ಡಿ, ನಾಗರಿಕ ವಿಮಾನಯಾನ ಕಾರ್ಯದರ್ಶಿ ರಾಜೀವ್ ನಾರಾಯಣ ಚೌಬೇ ಅವರನ್ನ ಆಗ್ರಹಿಸಿದ್ದಾರೆ. ಏರ್ ಇಂಡಿಯಾ, ಜೆಟ್ ಏರ್ ವೇಸ್ ಹಾಗೂ ವಿಸ್ತಾರಾ ತಮ್ಮ ಡೊಮೆಸ್ಟಿಕ್ ವಿಮಾನಗಳಲ್ಲೂ ಬ್ಯುಸಿನೆಸ್ ಕ್ಲಾಸ್ ಸೀಟನ್ನು ಆಫರ್ ಮಾಡುತ್ತಿವೆ.

ಅದೇ ರೀತಿ ಸ್ಪೈಸ್ ಜೆಟ್, ಇಂಡಿಗೋನಂತಹ ಇತರ ವಿಮಾನಗಳು ಕೂಡ ನೀಡಬೇಕು ಅನ್ನೋದು ಸಂಸದರ ವಾದ. ಬ್ಯುಸಿನೆಸ್ ಕ್ಲಾಸ್ ನಲ್ಲಿ ಸೀಟು ಖಾಲಿ ಇದ್ದಲ್ಲಿ ಅದನ್ನು ಸಂಸದರಿಗೆ ಒದಗಿಸಬೇಕು ಎಂಬ ಸೂಚನೆಯುಳ್ಳ ಸುತ್ತೋಲೆಯನ್ನು ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಕಳಿಸುವಂತೆ ಸಂಸದರು ಒತ್ತಾಯಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...