alex Certify
ಕನ್ನಡ ದುನಿಯಾ       Mobile App
       

Kannada Duniya

ನಿಮ್ಮನ್ನು ಬೆಚ್ಚಿಬೀಳಿಸುತ್ತೆ ಈ ದೃಶ್ಯ: ಮಹಿಳೆ ಎದೆಗೆ ಒದ್ದಿದ್ದಾನೆ ಲಜ್ಜೆಗೆಟ್ಟ ಅಧಿಕಾರಿ

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿರುವ ಕೃತ್ಯದ ದೃಶ್ಯ ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ. ಪಂಚಾಯಿತಿ ಅಧಿಕಾರಿಯೊಬ್ಬ ಮಹಿಳೆಗೆ ಜಾಡಿಸಿ ಒದ್ದಿದ್ದು, ಇದೀಗ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ.

ಕೆಲಸದ ನಿಮಿತ್ತ ಕಛೇರಿಗೆ ಬಂದಿದ್ದ ಈ ಮಹಿಳೆ ಬಳಿ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನೆನ್ನಲಾಗಿದೆ. ಇದಕ್ಕೆ ಮಹಿಳೆ ನಿರಾಕರಿಸಿದಾಗ ಪದೇ ಪದೇ ಅಲೆದಾಡಿಸಿದ್ದು, ಇದರಿಂದ ಬೇಸತ್ತ ಮಹಿಳೆ ಕೆಲವರೊಂದಿಗೆ ಬಂದು ಅಧಿಕಾರಿಯನ್ನು ಪ್ರಶ್ನಿಸಿದ್ದಾಳೆ.

ಪಂಚಾಯಿತಿ ಅಧಿಕಾರಿ ಉಡಾಫೆಯಿಂದ ವರ್ತಿಸಿದ್ದು, ರೊಚ್ಚಿಗೆದ್ದ ಮಹಿಳೆ ತನ್ನ ಚಪ್ಪಲಿ ಕೈಗೆತ್ತಿಕೊಂಡಿದ್ದು, ಈ ವೇಳೆ ಅಧಿಕಾರಿ ಮಹಿಳೆಗೆ ಕಾಲಿನಿಂದ ಜಾಡಿಸಿ ಒದ್ದಿದ್ದಾನೆ. ಇದರಿಂದಾಗಿ ಮಹಿಳೆ ನೆಲಕ್ಕೆ ಬಿದ್ದಿದ್ದು, ಈಗ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...