alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಆಪ್ ನಲ್ಲಿ ಸಿಗಲಿದೆ ರುಚಿ ರುಚಿ ಕಡಕನಾಥ್ ಕೋಳಿ ಮಾಂಸ

ಮಾಂಸಹಾರಿ ಅದ್ರಲ್ಲೂ ಕಡಕನಾಥ್ ಕೋಳಿ ಪ್ರಿಯರಿಗೆ ಇಲ್ಲೊಂದು ಖುಷಿ ಸುದ್ದಿಯಿದೆ. ದೇಶದಾದ್ಯಂತ ಕಡಕನಾಥ್ ಕೋಳಿ ಮಾಂಸಕ್ಕೆ ಹೆಚ್ಚಾಗುತ್ತಿರುವ ಬೇಡಿಕೆ ಗಮನಿಸಿ ಮಧ್ಯಪ್ರದೇಶ ಸರ್ಕಾರ MPKadakNath ಹೆಸರಿನ ಆ್ಯಪ್ ಶುರು ಮಾಡಿದೆ.

ಭೋಪಾಲ್ ಸಹಕಾರಿ ಸಚಿವ ವಿಶ್ವಾಸ್ ಸಾರಂಗ್ ಆ್ಯಪ್ ಉದ್ಘಾಟನೆ ಮಾಡಿದ್ರು. ಈ ಮೊಬೈಲ್ ಆ್ಯಪ್ ಆಂಡ್ರಾಯ್ಡ್ ಫೋನ್ ನಲ್ಲಿ ಸಿಗಲಿದೆ. ಈ ಆ್ಯಪ್ ಮೂಲಕ ದೇಶದಾದ್ಯಂತ ಗ್ರಾಹಕರು ಕಡಕನಾಥ್ ಕೋಳಿ ಮಾಂಸದ ರುಚಿ ನೋಡಬಹುದಾಗಿದೆ. ಇದ್ರ ಜೊತೆಗೆ ಕೋಳಿಗಳು ಎಲ್ಲಿಲ್ಲಿ ಹೆಚ್ಚಿವೆ ಎಂಬ ಮಾಹಿತಿ ಕೂಡ ಇದ್ರಲ್ಲಿ ಲಭ್ಯವಾಗಲಿದೆ.

ಮಧ್ಯಪ್ರದೇಶದ ಝಾಬುವಾ ಮತ್ತು ಅಲಿರಾಜಪುರ್ ಬುಡಕಟ್ಟು ಪ್ರದೇಶದಲ್ಲಿ ಕಡಕನಾಥ್ ಕೋಳಿಯನ್ನು ಸಾಕಲಾಗುತ್ತದೆ. ಈ ಕೋಳಿಯ ಮಾಂಸ ತುಂಬಾ ರುಚಿ ಹಾಗೂ ಪೌಷ್ಟಿಕವಾಗಿರುತ್ತದೆ. ಈ ಕೋಳಿಯಲ್ಲಿ ಶೇಕಡಾ 25-27ರಷ್ಟು ಪೌಷ್ಟಿಕಾಂಶವಿರುತ್ತದೆಯಂತೆ. ಇದ್ರ ಮಾಂಸ ಸೇವನೆಯಿಂದ ಕೊಬ್ಬು ಕಡಿಮೆಯಾಗುತ್ತದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...