alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲಾ ದಾಖಲಾತಿಗಳಲ್ಲಿ ನಡೆದಿದೆ ಭಾರೀ ವಂಚನೆ

edu-chnschool

ಅದೆಷ್ಟೋ ದಿನಗಳಿಂದ ಮಂಜು ಸುಮನ್ ಶಾಲೆಗೆ ಹೋಗಿರಲಿಲ್ಲ. ಮಧ್ಯಪ್ರದೇಶ ಪೊಲೀಸರು ತನ್ನನ್ನು ಹುಡುಕಿಕೊಂಡು ಬರಬಹುದು ಅನ್ನೋ ಕಲ್ಪನೆಯೂ ಅವಳಿಗಿರಲಿಲ್ಲ. ವಿದ್ಯಾಭ್ಯಾಸ ಮುಂದುವರಿಸುವಂತೆ ಮಂಜುವನ್ನು ಪ್ರೋತ್ಸಾಹಿಸಲು ಪೊಲೀಸರು ಶೋಪುರ್ ಗೆ ಬಂದಾಗ ಆಕೆ ಅಲ್ಲಿರಲಿಲ್ಲ.

ಸುಮಾರು ವರ್ಷಗಳ ಹಿಂದೆಯೇ ಮಂಜು ಸುಮನ್ ಮದುವೆಯಾಗಿ ರಾಜಸ್ತಾನಕ್ಕೆ ಹೊರಟು ಹೋಗಿದ್ಲು. ಅವಳಿನ್ನೂ 13 ವರ್ಷದ ಬಾಲಕಿ ಎಂದುಕೊಂಡಿದ್ರು ಪೊಲೀಸರು, ಆದ್ರೆ ಮಂಜುಗೆ ಈಗ 40 ವರ್ಷ. ಶಾಲಾ ದಾಖಲಾತಿಗಳಲ್ಲಿ ಮಾತ್ರ ಆಕೆಯ ವಯಸ್ಸಿನ್ನೂ 13 ವರ್ಷ ಅಂತಾ ಬರೆಯಲಾಗಿದೆ.

ಈ ಬಗ್ಗೆ ತನಿಖೆ ನಡೆಸಿದಾಗ ಮಧ್ಯಪ್ರದೇಶದಲ್ಲಿ ನಡೆಯುತ್ತಿದ್ದ ವಂಚನೆಯೊಂದು ಬೆಳಕಿಗೆ ಬಂದಿದೆ. ಸುಮಾರು 600 ಜನರ ವಯಸ್ಸಿನ ಬಗ್ಗೆ ಸುಳ್ಳು ದಾಖಲಾತಿಗಳನ್ನು ಕೊಟ್ಟು ವಂಚಿಸಲಾಗುತ್ತಿತ್ತು. ಶಾಲೆ ಬಿಟ್ಟವರಿಗೆ ಮಧ್ಯಪ್ರದೇಶ ಸರ್ಕಾರ ನೀಡುತ್ತಿದ್ದ ಸವಲತ್ತು, ಮತ್ತು ವಿದ್ಯಾರ್ಥಿ ವೇತನಗಳನ್ನೆಲ್ಲ ಅಧಿಕಾರಿಗಳೇ ಕೊಳ್ಳೆ ಹೊಡೆಯುತ್ತಿದ್ರು.

ಜಿಲ್ಲೆಯಲ್ಲಿ ಹಲವರ ಹೆಸರನ್ನು ಶಾಲೆ ಬಿಟ್ಟವರ ಪಟ್ಟಿಯಲ್ಲಿ ಸೇರಿಸಲಾಗಿದೆ. 25 ವರ್ಷಕ್ಕೂ ಮೇಲ್ಪಟ್ಟವರ ವಯಸ್ಸನ್ನು ಕೂಡ ಕಡಿಮೆ ನಮೂದಿಸಿ ವಂಚಿಸಲಾಗುತ್ತಿದೆ. ಶಾಲೆ ಬಿಟ್ಟವರ ಪಟ್ಟಿಯಲ್ಲಿರುವ ಬಹುತೇಕರಿಗೆ ಈಗಾಗ್ಲೇ ಮದುವೆಯಾಗಿದೆ, ಹಲವರು ಬೇರೆ ಊರುಗಳಿಗೂ ಶಿಫ್ಟ್ ಆಗಿದ್ದಾರೆ.

ಹಾಗಾಗಿ ಇದರಲ್ಲಿ ದೊಡ್ಡ ದಂಧೆಯೇ ನಡೆಯುತ್ತಿದೆ ಅನ್ನೋ ಅನುಮಾನ ಮೂಡಿದ್ದು, ತನಿಖೆಗೂ ಆದೇಶಿಸಲಾಗಿದೆ. ಕಾನೂನಿನ ಪ್ರಕಾರ 5-14 ವರ್ಷ ವಯಸ್ಸಿನ ಮಕ್ಕಳು ಶಾಲೆಗೆ ಹಾಜರಾಗುವುದು ಕಡ್ಡಾಯ. ಈ ಮಕ್ಕಳು ಮಧ್ಯದಲ್ಲೇ ಶಾಲೆ ತೊರೆದರೆ ಅವರ ಮನವೊಲಿಸಿ ಮರಳಿ ಕರೆತರುವ ಯೋಜನೆಯನ್ನು ಕೂಡ ಹಮ್ಮಿಕೊಳ್ಳಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...