alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳತನ ಪ್ರಕರಣ ಬಗೆಹರಿದಿದ್ದು 48 ವರ್ಷಗಳ ಬಳಿಕ..!

mp_148ಮಧ್ಯ ಪ್ರದೇಶ ಪೊಲೀಸರ ಕಾರ್ಯವೊಂದು ಈಗ ನಗೆಪಾಟಲಿಗೆ ಗುರಿಯಾಗಿದೆ. 48 ವರ್ಷಗಳ ಹಿಂದೆ ನಡೆದಿದ್ದ ಕಳ್ಳತನ ಪ್ರಕರಣವೊಂದನ್ನು ಪೊಲೀಸರು ಈಗ ಬಗೆಹರಿಸಿದ್ದು, ಅಚ್ಚರಿಯ ಸಂಗತಿಯೆಂದರೆ 21 ವರ್ಷಗಳ ಹಿಂದೆಯೇ ಆರೋಪಿ ಸಾವನ್ನಪ್ಪಿದ್ದಾನೆ.

1969 ರಲ್ಲಿ ಬಿಂಡ್ ಜಿಲ್ಲೆಯ ಚಂಬಲ್ ಪ್ರದೇಶದಲ್ಲಿ ಮಧ್ಯಪ್ರದೇಶ ಎಲೆಕ್ಟ್ರಿಸಿಟಿ ಬೋರ್ಡ್ ಗೆ ಸೇರಿದ್ದ ವೈರ್ ಕಳ್ಳತನವಾಗಿದ್ದು, ಇದರ ಮೌಲ್ಯ 10 ರೂ.ಗಳಾಗಿತ್ತು. ಮಹಾದೇವ್ ಎಂಬಾತನ ಮೇಲೆ ಶಂಕೆ ಹೊಂದಿದ್ದ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಪೊಲೀಸರು ಮಾತ್ರ ಯಾವುದೇ ತನಿಖೆ ನಡೆಸದೆ ನಿರಾಸಕ್ತಿ ತೋರಿಸಿದ್ದು, 2005 ರಲ್ಲಿ ನ್ಯಾಯಾಲಯ ಮಹಾದೇವ್ ನ ಬಂಧನಕ್ಕೆ ಆದೇಶ ಹೊರಡಿಸಿತ್ತು. ಇತ್ತೀಚೆಗೆ ಹಳೆ ಪ್ರಕರಣಗಳ ವಿಲೇವಾರಿ ಮಾಡಲು ಸೂಚನೆ ಬಂದಾಗ ಎಚ್ಚೆತ್ತುಕೊಂಡ ಪೊಲೀಸರು, ಕೊನೆಗೂ ಆರೋಪಿ ಮಹಾದೇವ್ ಕುಶ್ವಾನ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ. ಆತನನ್ನು ವಶಕ್ಕೆ ಪಡೆಯಲು ಪೊಲೀಸರು ತೆರಳಿದಾಗ ಆತ 21 ವರ್ಷಗಳ ಹಿಂದೆಯೇ ಸಾವನ್ನಪ್ಪಿರುವುದು ತಿಳಿದುಬಂದಿದೆ. ಇದೀಗ ಆತನ ಡೆತ್ ಸರ್ಟಿಫಿಕೇಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಪೊಲೀಸರು ಕೈತೊಳೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...