alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಟಕಿ ಮೂಲಕ ತಪ್ಪಿಸಿಕೊಂಡ ಕಳ್ಳ: ಸುಖ ನಿದ್ರೆಯಲ್ಲಿದ್ರು ಪೊಲೀಸ್

ಮಧ್ಯಪ್ರದೇಶದಲ್ಲಿ ಪೊಲೀಸರ ನಿರ್ಲಕ್ಷ್ಯಕ್ಕೆ ಈ ಘಟನೆ ಕೈನ್ನಡಿಯಾಗಿದೆ. ಮೊರೆನಾ ಜಿಲ್ಲೆಯ ಪೊಲೀಸರು ಕಳ್ಳನೊಬ್ಬನನ್ನು ಹಿಡಿದು ತಂದಿದ್ದಾರೆ. ಆತನನ್ನು ಲಾಕಪ್ ನಲ್ಲಿ ಹಾಕಿ ನಿಶ್ಚಿಂತೆಯಿಂದ ಮಲಗಲು ಹೋಗಿದ್ದಾರೆ. ಆದ್ರೆ ಕಳ್ಳ ಸಿಕ್ಕ ಸಮಯವನ್ನು ಹಾಳು ಮಾಡಲಿಲ್ಲ. ತಲೆ ಓಡಿಸಿ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಳ್ಳಲು ಯಶಸ್ವಿಯಾಗಿದ್ದಾನೆ.

ಲಾಕಪ್ ನಲ್ಲಿರುವ ಕಿಟಕಿಯಿಂದ ಕಳ್ಳ ಹೊರಬಂದಿದ್ದಾನೆ. ಸಣ್ಣ ಕಿಂಡಿಯಲ್ಲಿ ಮೊದಲು ತಲೆ, ನಂತ್ರ ಕೈ, ಆಮೇಲೆ ಹೊಟ್ಟೆ ಹೊರಹಾಕಿ, ಕೈ ಸಹಾಯದಿಂದ ಕಾಲನ್ನು ಹೊರಗೆ ಹಾಕಿ ಲಾಕಪ್ ನಿಂದ ಹೊರ ಬಂದಿದ್ದಾನೆ. ನಂತ್ರ ಇನ್ನೊಂದು ಕಿಟಕಿ ಮೂಲಕ ಠಾಣೆಯಿಂದ ಯಶಸ್ವಿಯಾಗಿ ಹೊರ ಹೋಗಿದ್ದಾನೆ.

ಇಷ್ಟೆಲ್ಲ ಘಟನೆ ನಡೆಯುತ್ತಿದ್ದರೂ ಪೊಲೀಸರಿಗೆ ಮಾತ್ರ ನಿದ್ರೆಯಿಂದ ಎಚ್ಚರವಾಗಲಿಲ್ಲ. ಸಿಸಿ ಟಿವಿಯಲ್ಲಿ ಕಳ್ಳನ ಚಾಲಾಕಿತನ ಸೆರೆಯಾಗಿದೆ. ಘಟನೆ ನಂತ್ರ ಎಎಸ್ಐ ಹಾಗೂ ಇಬ್ಬರು ಕಾನ್ಸ್ಟೇಬಲ್ ಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...