alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ರೆಡ್ ಹ್ಯಾಂಡಾಗಿ ಹಿಡಿದ ತಾಯಿ

ಮಗಳನ್ನು ಪೀಡಿಸುತ್ತಿದ್ದ ಯುವಕನೊಬ್ಬನನ್ನು ಸಾಕ್ಷ್ಯ ಸಮೇತ ಹಿಡಿಯೋಕೆ ಜಾಲ ಹೆಣೆದು ಆ ಕೆಲಸದಲ್ಲಿ ತಾಯಿಯೊಬ್ಬರು ಯಶಸ್ವಿಯಾದ ಘಟನೆ ಭೋಪಾಲ್ ನಲ್ಲಿ ನಡೆದಿದೆ. 9ನೇ ತರಗತಿಯಲ್ಲಿ ಓದುತ್ತಿರುವ 14 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಸಮೀರ್ ಖಾನ್ ಅಲಿಯಾಸ್ ಶಾವರ್ ನನ್ನ ಪೊಲೀಸರು ಈಗ ಬಂಧಿಸಿದ್ದಾರೆ.

ಟೈಲರ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಮೀರ್ ಶಾಲೆಗೆ ಹೋಗಿ ಬರುತ್ತಿದ್ದ ಬಾಲಕಿಯನ್ನು ನಿತ್ಯ ಚುಡಾಯಿಸುತ್ತಿದ್ದ. ಬೈಕ್ ನಲ್ಲಿ ತನ್ನ ಜೊತೆ ಬರುವಂತೆ ಪೀಡಿಸುತ್ತಿದ್ದ. ಕೆಲ ದಿನಗಳ ಹಿಂದೆ ಬಾಲಕಿಗೆ ಒತ್ತಾಯಪೂರ್ವಕವಾಗಿ ಬೈಕ್ ನಲ್ಲಿ ಡ್ರಾಪ್ ಕೊಟ್ಟಿದ್ದ. ಈ ಪ್ರಕ್ರಿಯೆಯನ್ನು ಹೀಗೆ ಮುಂದುವರೆಸಿಕೊಂಡು ಬಂದ ಸಮೀರ್ ಇತ್ತೀಚೆಗೆ ಬಾಲಕಿಯನ್ನು ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ.

ಬಾಲಕಿ ಈ ವಿಚಾರವನ್ನು ತಾಯಿಗೆ ತಿಳಿಸಿದ್ದಾಳೆ. ಸಮೀರ್ ನನ್ನ ಸಾಕ್ಷ್ಯ ಸಮೇತವಾಗಿ ಹಿಡಿಯೋದಕ್ಕೆ ನಿರ್ಧರಿಸಿದ್ದಾರೆ ತಾಯಿ. ಮಗಳನ್ನ ಆತ ಮತ್ತೊಮ್ಮೆ ಅದೇ ಸ್ಥಳಕ್ಕೆ ಕರೆದೊಯ್ಯುವ ವೇಳೆ ಆತನನ್ನ ಹಿಂಬಾಲಿಸಿಕೊಂಡು ಹೋಗಿದ್ದಾರೆ. ಮತ್ತೊಮ್ಮೆ ಬಾಲಕಿಯ ಮೇಲೆ ಅತ್ಯಾಚಾರ ಎಸಗೋಕೆ ಆತ ಪ್ರಯತ್ನಿಸುತ್ತಿದ್ದ ವೇಳೆ ಮಗಳನ್ನ ಕಾಪಾಡಿ ಸಮೀರ್ ನನ್ನ ತರಾಟೆ ತೆಗೆದುಕೊಂಡಿದ್ದಾರೆ. ಆನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಾರಿಯಾಗಲು ಯತ್ನಿಸಿದ ಸಮೀರನನ್ನ ಬಂಧಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...