alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯದಲ್ಲಿ ಯಶಸ್ಸು ಸಾಧಿಸಲು ವಿವಾಹವಾಗಬೇಡಿ ಎಂದ ಸಚಿವ

ರಾಜಕೀಯದಲ್ಲಿ ಯಶಸ್ಸು ಕಾಣಬೇಕೆ? ಹಾಗಿದ್ರೆ ಮದುವೆಯಾಗದೆ ಒಂಟಿಯಾಗಿರಿ. ಹೀಗೆಂದು ನಾವು ಹೇಳ್ತಿಲ್ಲ. ಮಧ್ಯ ಪ್ರದೇಶದ ಸಚಿವರೊಬ್ಬರು ನೀಡಿರುವ ಸಲಹೆಯಿದು. ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿರೋ ಪಾರಸ್ ಚಂದ್ರ ಜೈನ್ ಈ ಹೇಳಿಕೆ ನೀಡಿದ್ದಾರೆ.

ಅಂದ ಹಾಗೇ ಪಾರಸ್ ಚಂದ್ರ ಜೈನ್ ವಿವಾಹಿತರು. ಮಧ್ಯ ಪ್ರದೇಶದ ರಾಜಧಾನಿ ಭೋಪಾಲ್ ನಿಂದ 250 ಕಿ.ಮೀ. ದೂರದಲ್ಲಿರುವ ನಗರವೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಪಾರಸ್ ಚಂದ್ರ ಜೈನ್ ಈ ಹೇಳಿಕೆ ನೀಡಿದ್ದು, ಅದೀಗ ವೈರಲ್ ಆಗಿದೆ.

ಮದುವೆಯಾದರೆ ಕುಟುಂಬದ ಸಮಸ್ಯೆ ಶುರುವಾಗುತ್ತದೆ. ಆ ನಂತರ ಕುಟುಂಬ ದೊಡ್ಡದಾಗುತ್ತಾ ಹೋಗಲಿದ್ದು, ಸಮಸ್ಯೆಗಳ ಸರಮಾಲೆ ಆರಂಭವಾಗುತ್ತದೆ. ಅವಿವಾಹಿತರಿಗೆ ಇದ್ಯಾವ ಸಮಸ್ಯೆಯೂ ಇರುವುದಿಲ್ಲ. ಇದರಿಂದ ಅಂತವರು ರಾಜಕೀಯದಲ್ಲಿ ಯಶಸ್ಸು ಸಾಧಿಸಬಹುದು ಎಂದು ಪಾರಸ್ ಚಂದ್ರ ಜೈನ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನೂ ಜೈನ್ ಹಾಡಿ ಹೊಗಳಿದ್ದು, ಮೋದಿಯವರ ಕಾರಣಕ್ಕೆ ಭಾರತವಿಂದು ವಿದೇಶಗಳಲ್ಲೂ ಗೌರವದ ಸ್ಥಾನ ಪಡೆಯುವಂತಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...