alex Certify
ಕನ್ನಡ ದುನಿಯಾ       Mobile App
       

Kannada Duniya

ಹರಕೆ ಹೆಸರಲ್ಲಿ ಅನಾಹುತ ಮಾಡಿಕೊಂಡ್ಲು ವಿದ್ಯಾರ್ಥಿನಿ

19-year-old college girl cuts off tongue as offering to goddess Kali19 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಹರಕೆಯ ಹೆಸರಿನಲ್ಲಿ ಅನಾಹುತ ಮಾಡಿಕೊಂಡಿದ್ದಾಳೆ. ಕಾಳಿ ಮಂದಿರಕ್ಕೆ ಹೋಗಿದ್ದ ಆಕೆ ಅಲ್ಲಿದ್ದ ಭಕ್ತರ ಸಮ್ಮುಖದಲ್ಲೇ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡು ಹರಕೆ ತೀರಿಸಿದ್ದಾಳೆ.

ಇಂತದೊಂದು ವಿಲಕ್ಷಣ ಘಟನೆ ಮಧ್ಯ ಪ್ರದೇಶದ ರೀವಾ ಪಟ್ಟಣದಲ್ಲಿ ನಡೆದಿದ್ದು, ಆರತಿ ದುಬೆ ಎಂಬ ಈ ಕಾಲೇಜು ವಿದ್ಯಾರ್ಥಿನಿ ಕಾಳಿ ಮಾತೆ, ತನ್ನ ಕನಸಿನಲ್ಲಿ ಬಂದು ನಿನ್ನ ಇಷ್ಟಾರ್ಥಗಳನ್ನು ತೀರಿಸುವುದಾಗಿ ಹೇಳಿದ್ದಾಳೆ. ಹೀಗಾಗಿ ನಾನು ನನ್ನ ನಾಲಿಗೆಯನ್ನು ದೇವಿಗೆ ಆರ್ಪಿಸುವುದಾಗಿ ಸಹೋದರ ಸಚಿನ್ ಗೆ ತಿಳಿಸಿದ್ದಾಳೆ.

ಕಾಲೇಜು ವ್ಯಾಸಂಗ ಮಾಡುತ್ತಿರುವ ಸಹೋದರಿ ಇಂತದೊಂದು ಕೃತ್ಯ ಮಾಡಿಕೊಳ್ಳಬಹುದೆಂದು ಯೋಚಿಸದ ಆತ, ಅದನ್ನು ಸೀರಿಯಸ್ ಆಗಿ ಪರಿಗಣಿಸಿಲ್ಲ. ಆದರೆ ತನ್ನ ನಿರ್ಧಾರಕ್ಕೆ ಬದ್ದಳಾಗಿದ್ದ ಆರತಿ ಮಂದಿರಕ್ಕೆ ತೆರಳಿ ತನ್ನ ನಾಲಿಗೆಯನ್ನು ಕತ್ತರಿಸಿಕೊಂಡಿದ್ದಾಳೆ. ತೀವ್ರ ರಕ್ತಸ್ರಾವದಿಂದ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅಲ್ಲಿದ್ದವರು ಆಕೆಯನ್ನು ಆಸ್ಪತ್ರೆಗೆ ಸೇರಿಸುವ ಬದಲು ದೇವಿಯೇ ರಕ್ಷಿಸುತ್ತಾಳೆಂದು ಪ್ರಾರ್ಥನೆಯಲ್ಲಿ ತೊಡಗಿದ್ದಾರೆ.

ಕೆಲ ಸಮಯದ ನಂತರ ಆರತಿಗೆ ಪ್ರಜ್ಞೆ ಮರಳಿದ್ದು, ಆ ನೋವಿನಲ್ಲೂ ಪೂಜೆ ಸಲ್ಲಿಸಿ ಮಂದಿರಕ್ಕೆ ಪ್ರದಕ್ಷಿಣೆ ಹಾಕಿದ್ದಾಳೆ. ಇದನ್ನು ಕಂಡ ಭಕ್ತರು ಉಘೇ ಉಘೇ ಎಂದಿದ್ದಾರೆ. ಆದರೆ ಅಷ್ಟರಲ್ಲಿ ವಿಷಯ ತಿಳಿದ ಪೊಲೀಸರು ವೈದ್ಯರನ್ನು ಕರೆಸಿ ಆರತಿಗೆ ಚಿಕಿತ್ಸೆ ಕೊಡಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...