alex Certify
ಕನ್ನಡ ದುನಿಯಾ       Mobile App
       

Kannada Duniya

ಐಐಟಿ ದೆಹಲಿ ವಿದ್ಯಾರ್ಥಿಗೆ ನೀಡಿದ್ದ ತಿಂಡಿಯಲ್ಲಿತ್ತು ಸತ್ತ ಇಲಿ

ಐಐಟಿ-ಜೆಇಇ ಪರೀಕ್ಷೆ ದೇಶದಲ್ಲಿ ನಡೆಯೋ ಅತ್ಯಂತ ಕಠಿಣ ಎಕ್ಸಾಮ್ ಗಳಲ್ಲೊಂದು. ಅದನ್ನು ಪಾಸು ಪಾಡ್ಬೇಕು ಅಂತಾನೇ ಲಕ್ಷಾಂತರ ವಿದ್ಯಾರ್ಥಿಗಳು ಹಗಲು ರಾತ್ರಿ ಅಭ್ಯಾಸ ಮಾಡ್ತಾರೆ. ಐಐಟಿಯಲ್ಲಿ ಪ್ರವೇಶ ಸಿಕ್ಕಿದೆ ಅಂದ್ರೆ ಅದೊಂದು ಹೆಮ್ಮೆಯ ವಿಚಾರ.

ಹಾಗಾಗಿ ಗುಣಮಟ್ಟದ ಶಿಕ್ಷಣದ ಜೊತೆಗೆ ಒಳ್ಳೆ ಆಹಾರವನ್ನೂ ವಿದ್ಯಾರ್ಥಿಗಳು ನಿರೀಕ್ಷೆ ಮಾಡೋದು ಸಹಜ. ಯಾಕಂದ್ರೆ 4 ವರ್ಷಗಳ ಕಾಲ ಅವರು ಮನೆಯಿಂದ ದೂರವಿರ್ತಾರೆ. ಅದೇ ಹಾಸ್ಟೆಲ್ ಫುಡ್ ತಿಂದ್ಕೊಂಡೇ ಇರಬೇಕಾಗುತ್ತದೆ. ಆದ್ರೆ ಹಾಸ್ಟೆಲ್ ನಲ್ಲಿರೋ ವಾಸ್ತವ ಸ್ಥಿತಿಯೇ ಬೇರೆ.

ದೆಹಲಿಯಲ್ಲಿ ಪ್ರತಿಷ್ಠಿತ ಐಐಟಿ ವಿದ್ಯಾರ್ಥಿಯೊಬ್ಬನಿಗೆ ಬೆಳಗಿನ ತಿಂಡಿಯಲ್ಲಿ ಸತ್ತ ಇಲಿ ಸಿಕ್ಕಿದೆ. ಐಐಟಿ ಮೆಸ್ ನ ಈ ಅವಾಂತರವನ್ನು ವಿದ್ಯಾರ್ಥಿ ಫೇಸ್ಬುಕ್ ನಲ್ಲಿ ಬಹಿರಂಗಪಡಿಸಿದ್ದಾನೆ. ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಯೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡಲು ಹಾಗೂ ಸ್ವಚ್ಛತೆ ಕಾಪಾಡಲು ವಿಫಲವಾಗಿರೋದು ತೀವ್ರ ಟೀಕೆಗೆ ಗುರಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...