alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಡಿಮಿಡಿಗೊಂಡು ಸಭೆಯಿಂದ ಹೊರ ನಡೆದ್ರು ಸಚಿವೆ

ಭೋಪಾಲ್‌: ಮಧ್ಯಪ್ರದೇಶ ಕ್ರೀಡಾ ಸಚಿವೆ ಯಶೋಧರಾ ರಾಜೆ ಸಿಂಧಿಯಾ, ಕೋಪ ಇದೀಗ ದೊಡ್ಡ ಸುದ್ದಿಯಾಗಿದೆ.

ಶನಿವಾರ ಭೈರಗಡದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಬಿಜೆಪಿ ನಾಯಕರ ಸಭೆಗೆ ಮೊದಲೇ ಸಿಡುಕು ಮುಖ ಹೊತ್ತು ಬಂದ ಯಶೋಧರಾ ಅವರ ಸಿಟ್ಟು, ಸ್ಟೇಜ್‌ಗೆ ಬಂದ ಕೂಡಲೇ ದುಪ್ಪಟ್ಟಾಗಿದೆ. ವೇದಿಕೆಯಲ್ಲಿದ್ದ ಎಲ್ಲ ಬಿಜೆಪಿ ನಾಯಕರ ಭಾವಚಿತ್ರಗಳನ್ನು ನೋಡುತ್ತಲೇ ಅವರು, ಸಭೆಯನ್ನು ಬಹಿಷ್ಕರಿಸಿ ವಾಕ್‌ ಔಟ್‌ ಮಾಡಿದ್ದಾರೆ.

ಮಧ್ಯಪ್ರದೇಶದಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬರಲು ಪ್ರಮುಖ ಕಾರಣರಾಗಿರುವ ತಮ್ಮ ತಾಯಿ ರಾಜಮಾತೆ ವಿಜಯ ರಾಜೆ ಸಿಂಧಿಯಾ ಅವರ ಫೋಟೋ ವೇದಿಕೆಯಲ್ಲಿ ಕಾಣಿಸದೇ ಇದ್ದುದು ಯಶೋಧರಾ ಅವರ ಕೋಪಕ್ಕೆ ಕಾರಣವಾಗಿತ್ತು.

ದೀನ್‌ ದಯಾಳ್‌ ಉಪಾಧ್ಯಾಯ, ಅಟಲ್‌ ಬಿಹಾರಿ ವಾಜಪೇಯಿ, ಶಾಮ್ ಪ್ರಸಾದ್‌ ಮುಖರ್ಜಿ ಸೇರಿ ಇನ್ನಿತರ ಬಿಜೆಪಿಯ ನಾಯಕರ ಜೊತೆಗೆ ತಮ್ಮ ತಾಯಿಯ ಭಾವಚಿತ್ರ ಏಕಿಲ್ಲ ಎಂದು ಪ್ರಶ್ನಿಸಿದ ಸಚಿವೆ ಯಶೋಧರಾ, ಸಭೆಯನ್ನೇ ಬಹಿಷ್ಕರಿಸಿ ಹೊರನಡೆದಿದ್ದಾರೆ.

ಜೊತೆಗೆ ತಮಗೆ ವೇದಿಕೆಯಲ್ಲಿ ಸ್ಥಳ ನೀಡದೇ ಇದ್ದುದಕ್ಕೆ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಂದಕುಮಾರ್‌ ಚೌಹಾಣ್‌ ಸಹ ಅಸಮಾಧಾನ ತೋರಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯ ಬಿಜೆಪಿ ನಾಯಕರು, ಕ್ಷಮೆಯಾಚಿಸಿ, ರಾಜಮಾತೆ ಅವರ ಭಾವಚಿತ್ರ ಇರಿಸಿದರಾದರೂ, ಯಶೋಧರಾ ಸಭೆಗೆ ಹಿಂದಿರುಗಲು ನಿರಾಕರಿಸಿದ್ದಾರೆ.
ಬಿಜೆಪಿ ವಕ್ತಾರರು, ಆಗಿರುವ ಪ್ರಮಾದವನ್ನು ಒಪ್ಪಿಕೊಂಡಿದ್ದಾರೆ. ಸೆ.25 ರಂದು ದೀನ್‌ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ ಅಂಗವಾಗಿ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನಿ ಮೋದಿ ಹಾಗೂ ಅಧ್ಯಕ್ಷ ಅಮಿತ್‌ ಶಾ ಪಾಲ್ಗೊಳ್ಳಲಿದ್ದಾರೆ. ಈ ಸಂಬಂಧ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಸಭೆ ನಡೆಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...