alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳ ಶಾಲಾ ಶುಲ್ಕ ಕಟ್ಟಲು ಇಂಥ ದಾರಿ ಹಿಡಿದ ತಾಯಿ

tayi-kidny

ಲಖ್ನೋ: ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆ ಜಾರಿಯಾದರೇನಂತೆ, ಮಕ್ಕಳಿಗೆ ಶಿಕ್ಷಣ ಕಡ್ಡಾಯವಾಗಿರಬೇಕೆಂಬ ನಿಯಮ ಇದ್ದರೇನಂತೆ. ಮಕ್ಕಳ ಶಾಲಾ ಶುಲ್ಕ ಕಟ್ಟಲು ಕೂಡ ಪೋಷಕರು ಎಷ್ಟೆಲ್ಲಾ ಕಷ್ಟಪಡುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಜ್ವಲಂತ ನಿದರ್ಶನ

ಮಕ್ಕಳ ಶಾಲಾ ಶುಲ್ಕವನ್ನು ಭರಿಸಲು ಮಹಿಳೆಯೊಬ್ಬರು ತಮ್ಮ ಕಿಡ್ನಿಯನ್ನೇ ಮಾರಾಟಕ್ಕೆ ಇಟ್ಟ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಆಗ್ರಾ ಸಮೀಪದ ರೋಹಟಾದ ಎಕೋ ಕಾಲೋನಿಯಲ್ಲಿ ವಾಸವಾಗಿರುವ ಆರತಿ ಶರ್ಮಾ ಇಂತಹ ನಿರ್ಧಾರ ಕೈಗೊಂಡ ಮಹಿಳೆ. ಮೂವರು ಹೆಣ್ಣು ಮಕ್ಕಳು ಸೇರಿದಂತೆ ನಾಲ್ವರು ಮಕ್ಕಳನ್ನು ಹೊಂದಿರುವ ಆರತಿ ಶರ್ಮ ಅವರ ಪತಿ ಬಟ್ಟೆ ವ್ಯಾಪಾರ ಮಾಡುತ್ತಾರೆ.

ನೋಟ್ ಬ್ಯಾನ್ ಮಾಡಿದ ಬಳಿಕ ಅವರ ವ್ಯಾಪಾರ ಸಂಪೂರ್ಣ ಕುಸಿದು ಕುಟುಂಬ ಸಂಕಷ್ಟದಲ್ಲಿದೆ. ಮಕ್ಕಳ ಶಾಲಾ ಶುಲ್ಕ ಭರಿಸಲು ಕೂಡ ಸಾಧ್ಯವಾಗುತ್ತಿಲ್ಲ.

ಇದರಿಂದ ಆತ್ಮಹತ್ಯೆಗೆ ಯೋಚಿಸಿದ ಆರತಿ ನಂತರ ಕಿಡ್ನಿ ಮಾರುವುದು ಲೇಸು ಎಂದು ಭಾವಿಸಿ ಸಂಘಟನೆಗಳ ನೆರವು ಪಡೆದು ತಮ್ಮ ಕಿಡ್ನಿಯ ಮಾರಾಟಕ್ಕೆ ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...