alex Certify
ಕನ್ನಡ ದುನಿಯಾ       Mobile App
       

Kannada Duniya

ಪುತ್ರ ಸಾವನ್ನಪ್ಪಿದ ಕೆಲ ಹೊತ್ತಿನಲ್ಲೇ ತಾಯಿಯೂ ಸಾವು

ಕಾಯಿಲೆಯಿಂದ ಬಳಲುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿದ್ದು, ಈ ದುಃಖ ತಾಳಲಾರದೆ ಕೆಲ ಹೊತ್ತಿನಲ್ಲೇ ತಾಯಿಯೂ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನರಸಿಂಹರಾಜಪುರದಲ್ಲಿ ನಡೆದಿದೆ.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ 27 ವರ್ಷದ ಅರವಿಂದ್ ಎಂಬ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಸಾವಿಗೀಡಾಗಿದ್ದ. ಇದರಿಂದ ಆಘಾತಕ್ಕೀಡಾಗಿದ್ದ ತಾಯಿ ಮುನಿಯಮ್ಮ ಪುತ್ರನ ಪಾರ್ಥಿವ ಶರೀರದ ಮುಂದೆಯೇ ಕುಸಿದು ಬಿದ್ದಿದ್ದರು.

ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನದ ವೇಳೆಗೆ ಮೃತಪಟ್ಟಿದ್ದಾರೆ. ಒಂದೇ ದಿನ ಸಂಭವಿಸಿದ ತಾಯಿ-ಮಗನ ಸಾವು ಸಂಬಂಧಿಕರಿಗೆ ಆಘಾತವುಂಟು ಮಾಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...