alex Certify
ಕನ್ನಡ ದುನಿಯಾ       Mobile App
       

Kannada Duniya

ಅಮ್ಮ-ಮಗಳ ಒಂಟಿತನಕ್ಕೆ ಇಲಿಗಳೇ ಮದ್ದು..!

ಒಂಟಿತನ ಅತ್ಯಂತ ಅಪಾಯಕಾರಿ. ಖಿನ್ನತೆಯಿಂದ ಎಷ್ಟೋ ಜನರು ಪ್ರಾಣ ಕಳೆದುಕೊಳ್ತಿದ್ದಾರೆ. ಮುಂಬೈನಲ್ಲಿ ತಾಯಿ-ಮಗಳು ಈ ಏಕಾಂಗಿತನ ಅನ್ನೋ ಪೆಡಂಭೂತದಿಂದ ಪಾರಾಗಲು ಇಲಿಗಳ ಸಹಾಯ ಪಡೆದಿದ್ದಾರೆ. ನೂರಾರು ಇಲಿಗಳನ್ನು ಮನೆಯಲ್ಲಿ ಸಾಕಿದ್ದಾರೆ.

ಶ್ರಾವಣಿ ಆಚಾರ್ಯ ಮತ್ತವಳ ತಾಯಿ ಶುಭನಾ ಕಳೆದ 10 ವರ್ಷಗಳಿಂದ ನೂರಾರು ಇಲಿಗಳನ್ನು ಮನೆಯಲ್ಲಿಟ್ಟುಕೊಂಡಿದ್ದಾರೆ. ಇದ್ರಿಂದ ಅಕ್ಕಪಕ್ಕದ ಮನೆಯವರು ಫಜೀತಿ ಅನುಭವಿಸ್ತಿದ್ದಾರೆ. ಇಲಿಗಳ ಹಾವಳಿಗೆ ಬ್ರೇಕ್ ಹಾಕಲು ಹೊರಟಿರೋ ಬಿಎಂಸಿ ಕೂಡ ತಾಯಿ- ಮಗಳ ಇಲಿ ಪ್ರೇಮ ನೋಡಿ ಇಕ್ಕಟ್ಟಿಗೆ ಸಿಲುಕಿದೆ.

10 ವರ್ಷಗಳ ಹಿಂದೆ ಜಯಂತ್ ಆಚಾರ್ಯ ಮೃತಪಟ್ಟಿದ್ರು. ಆಗಿನಿಂದ್ಲೂ ಶುಭನಾ ಇಲಿಗಳನ್ನು ಸಾಕಲು ಶುರು ಮಾಡಿದ್ದಾರೆ. ತಾಯಿ-ಮಗಳು ಮೂರನೇ ಮಹಡಿಯಲ್ಲಿ ವಾಸ ಮಾಡ್ತಾರೆ. ಇಲಿಗಳ ದಂಡು ಅಕ್ಕಪಕ್ಕದ ಮನೆಗಳಿಗೆಲ್ಲಾ ನುಗ್ಗಿ ಕಾಟ ಕೊಡ್ತಿವೆ. ಈ ಬಗ್ಗೆ ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು.

ವೈರ್ ಗಳನ್ನು ಕಚ್ಚಿ ಹಾಕೋದು, ಬಟ್ಟೆ ತುಂಡರಿಸೋದು ಹೀಗೆ ಇಲಿಗಳ ತಂಟೆ ಒಂದೆರಡಲ್ಲ. ಆದ್ರೆ ಶ್ರಾವಣಿ ಹಾಗೂ ಶುಭನಾ ಇಲಿಗಳೇ ನಮಗೆ ಸ್ನೇಹಿತರು ಎನ್ನುತ್ತಾರೆ. ಇಬ್ಬರ ಮನವೊಲಿಸಿರೋ ಬಿಎಂಸಿ, ಇಲಿಗಳನ್ನು ಸೆರೆಹಿಡಿದಿದೆ. ಇನ್ನೂ ಸುಮಾರು 60 ಇಲಿಗಳಿದ್ದು, ಅವನ್ನು ಕೂಡ ಸೆರೆಹಿಡಿಯಲು ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...