alex Certify
ಕನ್ನಡ ದುನಿಯಾ       Mobile App
       

Kannada Duniya

ಆಶ್ಚರ್ಯಕರ ರೀತಿಯಲ್ಲಿ ಬದುಕಿ ಬಂದ ತಾಯಿ-ಮಗು

ಮಧ್ಯಪ್ರದೇಶ ಬಹರನ್ಪುರದಲ್ಲಿ ಆಶ್ಚರ್ಯಕಾರಿ ಘಟನೆ ನಡೆದಿದೆ. ವಿಚ್ಛೇದನದ ನಂತ್ರ ಮಹಿಳೆ ತನ್ನ ಒಂದುವರೆ ತಿಂಗಳ ಮಗುವಿನೊಂದಿಗೆ ರೈಲ್ವೆ ಹಳಿ ಮೇಲೆ ಮಲಗಿದ್ದಾಳೆ. 100 ಕಿಲೋಮೀಟರ್ ವೇಗದಲ್ಲಿ ರೈಲು ಆಕೆ ಮೇಲೆ ಹರಿದಿದೆ. ನಂತ್ರ ನಡೆದ ಘಟನೆ ನೋಡಿ ನೆರೆದಿದ್ದವರೆಲ್ಲ ದಂಗಾಗಿದ್ದಾರೆ.

ತಬ್ಸಮ್ ಹೆಸರಿನ ಮಹಿಳೆ ಗೋರಖ್ಪುರ್-ಕಾಶಿ ಎಕ್ಸ್ ಪ್ರೆಸ್ ನಲ್ಲಿ ಮುಂಬೈಗೆ ಹೋಗ್ತಿದ್ದಳು. ಆದ್ರೆ ನೋಪಾನಗರ್ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾಳೆ. ರೈಲ್ವೆ ಹಳಿ ಮೇಲೆ ಮಗು ಜೊತೆ ತಾನೂ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.ಮಹಿಳೆ ಮಲಗಿದ ಕೆಲವೇ ಕ್ಷಣಗಳಲ್ಲಿ 100 ಕಿಲೋಮೀಟರ್ ವೇಗದಲ್ಲಿ ರೈಲೊಂದು ಹಾದು ಹೋಗಿದೆ.

ನಿಲ್ದಾಣದಲ್ಲಿದ್ದ ಜನರೆಲ್ಲ ದುಃಖ ವ್ಯಕ್ತಪಡಿಸಿದ್ದಾರೆ. ಕಣ್ಣ ಮುಂದೆಯೇ ಎರಡು ಜೀವ ಬಲಿಯಾಯ್ತು ಎಂದುಕೊಂಡಿದ್ದಾರೆ. ಆದ್ರೆ ಅಲ್ಲಿ ಆಗಿದ್ದೇ ಬೇರೆ. ರೈಲ್ವೆ ಹಾದು ಹೋದ್ರೂ ಮಲಗಿದ್ದ ಮಗು ಹಾಗೂ ತಾಯಿಗೆ ಸಣ್ಣ ಗಾಯ ಕೂಡ ಆಗಲಿಲ್ಲ. 25 ವರ್ಷದ ಮಹಿಳೆ ಪತಿಯಿಂದ ವಿಚ್ಛೇದನ ಪಡೆದ ಮೇಲೆ ಒತ್ತಡಕ್ಕೊಳಗಾಗಿದ್ದಳಂತೆ. ಮುಂದೇನು ಎಂಬುದು ಗೊತ್ತಾಗದೆ ಆತ್ಮಹತ್ಯೆಗೆ ಯತ್ನಿಸಿದ್ದಳಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...