alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರವಾಹದ ಮಧ್ಯೆ 400 ರೂ. ಗೆ ಏರಿಕೆಯಾಯ್ತು ಕೆ.ಜಿ. ಹಸಿಮೆಣಸಿನ ಬೆಲೆ…!

1924ರ ನಂತ್ರ ಕೇರಳದಲ್ಲಿ ಕಾಣಿಸಿಕೊಂಡ ಅತಿದೊಡ್ಡ ಪ್ರವಾಹ ಜನರನ್ನು ಹೈರಾಣಾಗಿಸಿದೆ. ಪ್ರಕೃತಿ ವಿಕೋಪ ತರಕಾರಿ ಬೆಲೆ ಗಗನಕ್ಕೇರಲು ಕಾರಣವಾಗಿದೆ. ಒಂದು ಕಡೆ ಪ್ರವಾಹ, ಇನ್ನೊಂದು ಕಡೆ ಬೆಲೆ ಏರಿಕೆ ಬಿಸಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಕೊಚ್ಚಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಭಾನುವಾರ ಕೆ.ಜಿ. ಹಸಿಮೆಣಸು 400 ರೂಪಾಯಿಗೆ ಮಾರಾಟವಾಗಿದೆ. ಬೆಳಿಗ್ಗೆ ಅಂಗಡಿ ಬಾಗಿಲು ತೆರೆದ ವ್ಯಾಪಾರಿಗಳು ಪ್ರವಾಹದ ಲಾಭ ಪಡೆಯಲು ಮುಂದಾಗಿದ್ದಾರೆ. ಮೆಣಸನ್ನು ಕೆ.ಜಿ.ಗೆ 400 ರೂ. ನಂತೆ ಮಾರಾಟ ಮಾಡಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾದ ಸ್ಥಳೀಯರು ಪೊಲೀಸರ ಸಹಾಯ ಪಡೆದಿದ್ದಾರೆ. ಪೊಲೀಸ್ ಮಧ್ಯ ಪ್ರವೇಶದ ನಂತ್ರ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ.

ಸದ್ಯ ಹಸಿ ಮೆಣಸು 120 ರೂಪಾಯಿ ಪ್ರತಿ ಕೆ.ಜಿ. ಯಂತೆ ಮಾರಾಟವಾಗ್ತಿದೆ. ಪೊಲೀಸ್ ಹಸ್ತಕ್ಷೇಪದ ಮೊದಲು ಈರುಳ್ಳಿ, ಟೋಮೋಟೋ, ಎಲೆಕೋಸು 90 ರೂಪಾಯಿ ಕೆ.ಜಿ. ಯಂತೆ ಮಾರಾಟವಾಗಿದೆ. ಅಕ್ಕಿ ಹಾಗೂ ಸಕ್ಕರೆ ಬೆಲೆಯಲ್ಲೂ 15 ರೂಪಾಯಿ ಏರಿಸಲಾಗಿದೆ. ಸಾರಿಗೆ ವೆಚ್ಚದಲ್ಲಿ ಹೆಚ್ಚಳವಾದ ಕಾರಣ ತರಕಾರಿ, ಆಹಾರ ವಸ್ತುಗಳ ಬೆಲೆ ಏರಿಕೆ ಅನಿವಾರ್ಯವೆಂದು ಅಂಗಡಿ ಮಾಲೀಕರು ಹೇಳ್ತಿದ್ದಾರೆ. ಬೆಲೆ ಏರಿಸಿ ಲಾಭ ಪಡೆಯಲು ಮುಂದಾಗಿರುವ ವ್ಯಾಪಾರಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಅಧಿಕಾರಿಗಳು ಆದೇಶ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...