alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತೀಯರ ಬಳಿಯಿರೋ ಬಲು ದುಬಾರಿ ಕಾರುಗಳಿವು

ಪ್ರಪಂಚದಲ್ಲಿರೋ ಕೆಲವು ಕಾರುಗಳನ್ನು ಶ್ರೀಮಂತರು ಮಾತ್ರ ಖರೀದಿಸಲು ಸಾಧ್ಯ. ಅಂತಹ ಹಲವು ಐಷಾರಾಮಿ ಕಾರುಗಳು ಭಾರತೀಯರ ಬಳಿಯೂ ಇವೆ. ಬುಗಾಟ್ಟಿ ವೆಯ್ರಾನ್, ಮರ್ಸಿಡಿಸ್ ಬೆಂಜ್ ನಂತರ ದುಬಾರಿ ಕಾರುಗಳನ್ನು ಭಾರತದ ಶ್ರೀಮಂತರು ಕೂಡ ರಸ್ತೆಗಿಳಿಸಿದ್ದಾರೆ.

ನಟ ಶಾರುಖ್ ಖಾನ್ ಬಳಿ ಬುಗಾಟ್ಟಿ ವೆಯ್ರಾನ್ ಕಾರಿದೆ. ಇದರ ಬೆಲೆ ಸರಿಸುಮಾರು 12 ಕೋಟಿ ರೂಪಾಯಿ.

ನಟ ಅಮೀರ್ ಖಾನ್ ಕೂಡ ದುಬಾರಿ ಕಾರಿನ ಒಡೆಯ. ಅವರ ಬಳಿ 10 ಕೋಟಿ ಬೆಲೆಬಾಳುವ ಮರ್ಸಿಡಿಸ್ ಬೆಂಜ್ ಎಸ್600 ಕಾರಿದೆ.

ಭಾರತದ ಅತ್ಯಂತ ಶ್ರೀಮಂತ ಎನಿಸಿಕೊಂಡಿರೋ ಉದ್ಯಮಿ ಮುಖೇಶ್ ಅಂಬಾನಿ ಅವರು ಮೇಬ್ಯಾಚ್ ಕಾರಿನ ಒಡೆಯ. ಈ ಐಷಾರಾಮಿ ಕಾರಿನ ಬೆಲೆ ಅಂದಾಜು 5.40 ಕೋಟಿ ರೂಪಾಯಿ.

ರೇಮಂಡ್ ಗ್ರೂಪ್ ನ ಅಧ್ಯಕ್ಷ ಹಾಗೂ ಎಂಡಿ ಗೌತಮ್ ಸಿಂಘಾನಿಯಾ ಅವರ ಬಳಿ 4 ಕೋಟಿ ಬೆಲೆಬಾಳುವ ಫೆರಾರಿ ಕಾರಿದೆ.

ಸೇರಂ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಅದರ್ ಪೂನವಲ್ಲಾ ‘ಬೆಂಟ್ಲಿ ಕಾಂಟಿನೆಂಟಲ್ ಜಿಟಿ’ ಕಾರನ್ನು ಹೊಂದಿದ್ದಾರೆ. ಇದರ ಬೆಲೆ 4.5 ಕೋಟಿ ರೂಪಾಯಿ.

ರತನ್ ಟಾಟಾ ಕೂಡ ದುಬಾರಿ ಕಾರಿಗೆ ಒಡೆಯರಾಗಿದ್ದಾರೆ. ಟಾಟಾ ಬಳಿ 3.45 ಕೋಟಿ ರೂಪಾಯಿ ಮೌಲ್ಯದ ಫೆರಾರಿ ಕ್ಯಾಲಿಫೋರ್ನಿಯಾ ಕಾರಿದೆ.

ಉದ್ಯಮಿ ಅನಿಲ್ ಅಂಬಾನಿ ಅವರ ಬಳಿ ಲ್ಯಾಂಬೋರ್ಗಿನಿ ಗಲ್ಲಾರ್ಡೋ ಕಾರಿದೆ. ಇದರ ಬೆಲೆ ಸರಿಸುಮಾರು 3 ಕೋಟಿ ರೂಪಾಯಿ.

ನಟ ರಾಮ್ ಚರಣ್ ರೇಂಜ್ ರೋವರ್ ಆಟೋಬಯೋಗ್ರಫಿ ಕಾರು ಖರೀದಿಸಿದ್ದಾರೆ. ಇದರ ಮೌಲ್ಯ ಅಂದಾಜು 3 ಕೋಟಿ ರೂಪಾಯಿ.

ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ ಬಳಿ 2.20 ಕೋಟಿ ರೂಪಾಯಿ ಬೆಲೆಬಾಳುವ BMW i8 Price ಕಾರಿದೆ.

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ರೋಲ್ಸ್ ರಾಯ್ಸ್ ಫ್ಯಾಂಥಮ್ ಕಾರನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ ಸರಿಸುಮಾರು 3 ಕೋಟಿ ರೂಪಾಯಿ.

ವಿರಾಟ್ ಕೊಹ್ಲಿ ಬಳಿ ಆಡಿ ಕಾರುಗಳಿವೆ. ಕ್ಯೂ 7 ನಿಂದ ಹಿಡಿದು ಆರ್ 8 ಕಾರುಗಳವರೆಗೆ ಎಲ್ಲವನ್ನೂ ಕೊಹ್ಲಿ ಖರೀದಿಸಿದ್ದಾರೆ. ಕಳೆದ ವರ್ಷ ಆಡಿ ಆರ್8 ವಿ10 ಪ್ಲಸ್ ಕಾರನ್ನು ಕೊಹ್ಲಿ ಲಾಂಚ್ ಮಾಡಿದ್ದರು.

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬಳಿ 75 ಲಕ್ಷ ಬೆಲೆಬಾಳುವ ಹಮ್ಮರ್ ಎಚ್ 2 ಕಾರಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...