alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ನ್ಯೂಸ್! ಅಳಿವಿನಂಚಿನಲ್ಲಿವೆ ದೇಶದ 40 ಭಾಷೆಗಳು

ನವದೆಹಲಿ: ಭಾರತದಲ್ಲಿ 40 ಭಾಷೆಗಳು ಅಳಿವಿನಂಚಿನಲ್ಲಿವೆ. ದೇಶದಲ್ಲಿ 22 ನಿಗದಿತ ಮತ್ತು 100 ನಿಗದಿತವಲ್ಲದ ಭಾಷೆಗಳಿದ್ದು, ಇವುಗಳನ್ನು 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಜನ ಮಾತನಾಡುತ್ತಾರೆ.

ಜನಗಣತಿ ನಿರ್ದೇಶನಾಲಯದ ಮಾಹಿತಿ ಪ್ರಕಾರ 40 ಉಪ ಭಾಷೆಗಳು ಅಳಿವಿನಂಚಿಲ್ಲಿವೆ ಎಂದು ಪರಿಗಣಿಸಲಾಗಿದೆ. ಈ ಭಾಷೆಗಳನ್ನು ಕೆಲವೇ ಸಾವಿರ ಜನ ಮಾತನಾಡುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

22 ನಿಗದಿತ ಮತ್ತು 100 ನಿಗದಿತವಲ್ಲದ ಭಾಷೆಗಳನ್ನು ಹೆಚ್ಚಿನ ಸಂಖ್ಯೆಯ ಜನ ಬಳಸುತ್ತಾರೆ. ಸುಮಾರು 10,000 ಭಾಷೆಗಳಲ್ಲಿ 42 ಭಾಷೆಗಳನ್ನು ಕೆಲವೇ ಸಾವಿರ ಜನ ಮಾತನಾಡುತ್ತಾರೆ. ಇವು ಅಳಿಯಬಹುದಾಗಿದೆ ಎಂದು ಹೇಳಲಾಗಿದೆ.

ಯುನೆಸ್ಕೋ ಸಿದ್ಧಪಡಿಸಿದ ಭಾಷೆಗಳ ಪಟ್ಟಿಯಲ್ಲಿಯೂ ಭಾರತದ 42 ಉಪ ಭಾಷೆಗಳ ಬಗ್ಗೆ ಉಲ್ಲೇಖಿಸಲಾಗಿದ್ದು, ಅಳಿವಿನಂಚಿನಲ್ಲಿವೆ ಎಂದು ತಿಳಿಸಲಾಗಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಗ್ರೇಟ್ ಅಂಡಮಾನೀಸ್, ಜರಾವಾ, ಲ್ಯಾಮೊಂಗ್ಸೆ, ಲೂರೊ, ಮಯೋಟ್, ಓಂಗೇ, ಪು, ಸ್ಯಾನೆನೋಯೋ, ಸೆಂಟಿಲೀಸ್, ಸೋಂಪೇನ್, ತಕಾಹನ್ಯಿಲ್ಯಾಂಗ್, ಮಣಿಪುರದ ಏಳು, ಏಮಾಲ್, ಆಕಾ, ಕೊಯಿರೆನ್, ಲಾಂಗಾಂಗ್, ಲ್ಯಾಂಗ್ರಾಂಗ್, ಪುರಮ್ ಮತ್ತು ತಾರಾವ್, ಹಿಮಾಚಲ ಪ್ರದೇಶದ ಬಾಘತಿ, ಹಂದೂರಿ, ಪಂಗ್ವಾಲಿ, ಸರ್ಮಾಡಿ ಭಾಷೆಗಳು.

ಒಡಿಶಾದ ಮುಂಡಾ, ಪಾರ್ಜಿ, ಪೆಂಗೋ, ಕರ್ನಾಟಕದ ಕೋರಗಾ ಕುರುಬಾ, ಆಂಧ್ರಪ್ರದೇಶದ ಗದಾಬಾ, ನೈಕಿ, ತಮಿಳುನಾಡಿನ ಕೋಟಾ, ಟೋಡಾ, ಅರುಣಾಚಲ ಪ್ರದೇಶದ ಮಾರಾ, ನಾ, ಉತ್ತರಾಖಂಡ್ ನ ತೈ ನೋರಾ, ಜಾರ್ಖಂಡ್ ನ ಬಿಹೋರ್, ಮಹಾರಾಷ್ಟ್ರದ ನಿಹಾಲಿ, ಮೇಘಾಲಯದ ರುಗ, ಪಶ್ಚಿಮ ಬಂಗಾಳದ ಟೊಟೊ ಭಾಷೆಗಳು ಸೇರಿವೆ.

ಮೈಸೂರಿನ ಭಾರತೀಯ ಭಾಷೆಗಳ ಅಧ್ಯಯನ ಕೇಂದ್ರ ದೇಶದ ಅಳಿವಿನಂಚಿನಲ್ಲಿರುವ ಭಾಷೆಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದೆ. ಯೋಜನೆಗಳನ್ನು ರೂಪಿಸಿ ಭಾಷೆಗಳ ಅಧ್ಯಯನ, ವ್ಯಾಕರಣ ವಿವರಣೆ, ಏಕಭಾಷಾ, ದ್ವಿಭಾಷಾ ನಿಘಂಟು, ಜಾನಪದ ಕತೆಗಳ ಸಂಕಲನ ಮೊದಲಾದವುಗಳನ್ನು ತಯಾರಿಸುತ್ತಿದ್ದಾರೆ.

22 ನಿಗದಿತ ಭಾಷೆಗಳ ಹೊರತಾಗಿ ದೇಶದಲ್ಲಿ 31 ಇತರೆ ಭಾಷೆಗಳಿದ್ದು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಅಧಿಕೃತ ಭಾಷೆಯ ಸ್ಥಾನ ಮಾನ ನೀಡಲಾಗಿದೆ.

ಮಾಹಿತಿ ಪ್ರಕಾರ ದೇಶದಲ್ಲಿ 1635 ತರ್ಕಬದ್ಧ ಮಾತೃಭಾಷೆಗಳು, 234 ಗುರುತಿಸಬಹುದಾದ ಮಾತೃಭಾಷೆಗಳು, 22 ಪ್ರಮುಖವಾದ ಭಾಷೆಗಳು ಇವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...