alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮೆ ಪಡೆಯಲು ಸಲ್ಲಿಕೆಯಾಗಿರುವ ಅರ್ಜಿಗಳೆಷ್ಟು ಗೊತ್ತಾ?

ಕೇರಳ ಪ್ರವಾಹಕ್ಕೆ ಸಂಬಂಧಿಸಿದಂತೆ ಈಗ ವಿಮಾ ಕಂಪನಿಗಳಿಗೆ ಬಿಡುವಿಲ್ಲದಂತಾಗಿದೆ. ಸಾರ್ವಜನಿಕ ವಲಯದ ವಿಮಾ ಸೌಲಭ್ಯವನ್ನು ಪಡೆದುಕೊಳ್ಳೋಕೆ ಈಗ ಕೇರಳಿಗರು ಮುಂದಾಗಿದ್ದಾರೆ.

ಈಗಾಗ್ಲೇ 11 ಸಾವಿರಕ್ಕೂ ಹೆಚ್ಚು ಮಂದಿ ಇನ್ಸುರೆನ್ಸ್ ಕವರೇಜ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ 11 ಸಾವಿರಕ್ಕೂ ಹೆಚ್ಚು ಗ್ರಾಹಕರಿಗೆ 1200 ಕೋಟಿ ರೂಪಾಯಿಯನ್ನ ವಿಮಾ ಕಂಪನಿಗಳು ಪಾವತಿಸಬೇಕಿದೆ.

ಕೇರಳ ಸಂತ್ರಸ್ತರ ಬಗ್ಗೆ ವಿಮಾ ಕಂಪನಿಗಳು ಕೂಡ ಸಾಫ್ಟ್ ಕಾರ್ನರ್ ನಿಂದ ಯೋಚಿಸುತ್ತಿವೆ. ವಿಮಾ ಪ್ರಕ್ರಿಯೆಯನ್ನ ಸರಳಗೊಳಿಸೋಕೆ ಖಾಸಗಿ ವಿಮಾ ಕಂಪನಿಗಳು ನಿರ್ಧರಿಸಿವೆ. ಅಲ್ಲದೆ ವೇಗವಾಗಿ ಪ್ರಕ್ರಿಯೆಯನ್ನು ಮುಗಿಸಿ ಸಂತ್ರಸ್ಥರಿಗೆ ವಿಮೆಯ ಹಣವನ್ನು ನೀಡೋದಕ್ಕೆ ಮುಂದಾಗಿದೆ. ಅದಕ್ಕಾಗಿಯೇ ತಮಿಳುನಾಡು ಮತ್ತು ಕರ್ನಾಟಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ನೌಕರರನ್ನು ಕರೆಸಿಕೊಳ್ಳಲಾಗಿದೆ.

ಪ್ರವಾಹ ಪರಿಸ್ಥಿತಿಯಲ್ಲಿ ಸಾವನ್ನಪ್ಪಿರುವ ಎಲ್ಲರಿಗೂ ವಿಮಾ ಸೌಲಭ್ಯವನ್ನು ದೊರಕಿಸಿ ಕೊಡಲಾಗುತ್ತದೆಯಂತೆ. ಮೊಬೈಲ್ ಸಂದೇಶ , ಇ- ಮೇಲ್ ಸಂಪರ್ಕ ಮತ್ತು ನೇರ ಸಂಭಾಷಣೆಯೊಂದಿಗೆ ವಿಮಾ ಕಂಪನಿಗಳು ಗ್ರಾಹಕರ ಕಷ್ಟ ಪರಿಹರಿಸಲು ಕಾರ್ಯ ನಿರ್ವಹಿಸುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...