alex Certify
ಕನ್ನಡ ದುನಿಯಾ       Mobile App
       

Kannada Duniya

52 ಮಹಿಳೆಯರ ಮೇಲೆ ‘ಆಪ್’ ನಾಯಕರಿಂದ ಲೈಂಗಿಕ ದೌರ್ಜನ್ಯ..?

aap womenಆಪ್ ಮಾಜಿ ಶಾಸಕ ಸಂದೀಪ್ ಕುಮಾರ್ ಸೆಕ್ಸ್ ಸಿಡಿ ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಮತ್ತಷ್ಟು ಸಂದಿಗ್ಧ ಸ್ಥಿತಿ ಎದುರಾಗಿದೆ.

ದೆಹಲಿಯ 52 ಆಮ್ ಆದ್ಮಿ ಮಹಿಳಾ ಕಾರ್ಯಕರ್ತರ ಮೇಲೆ ಪಕ್ಷದ ನಾಯಕರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಪಂಜಾಬ್ ನ ಫಿರೋಜ್ಪುರ ಘಟಕ ಮತ್ತು ರಾಜ್ಯ ಸಮಿತಿಯ ಮಾಜಿ ಸದಸ್ಯ ಅಮನ್ದೀಪ್ ಕೌರ್ ಈ ಆರೋಪ ಮಾಡಿದ್ದಾರೆ.

ಮಹಿಳಾ ಸುರಕ್ಷತೆಯ ಹೆಸರು ಹೇಳಿಕೊಂಡೇ ಅಧಿಕಾರಕ್ಕೆ ಬಂದ ಎಎಪಿ, ಜನರಿಗೆ ಕೊಟ್ಟ ಮಾತನ್ನು ಮರೆತಿದೆ. ಪಕ್ಷದೊಳಗಿರುವ ಮಹಿಳೆಯರಿಗೇ ರಕ್ಷಣೆಯಿಲ್ಲ ಅಂತಾ ಅಮನ್ದೀಪ್ ಟೀಕಿಸಿದ್ದಾರೆ. ರಾಜ್ಯಮಟ್ಟದ ಸಭೆಯೊಂದರಲ್ಲಿ ತಮಗೂ ಕೆಟ್ಟ ಪದಗಳಿಂದ ನಿಂದಿಸಲಾಗಿತ್ತು, ಈ ಬಗ್ಗೆ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ಮಾಹಿತಿ ನೀಡಿದ್ದೆ. ಆದ್ರೆ ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಅಂತಾ ಅಮನ್ದೀಪ್ ದೂರಿದ್ದಾರೆ.

ಆಪ್ ನಾಯಕರಿಂದ ಲೈಂಗಿಕ ದೌರ್ಜನ್ಯಕ್ಕೊಳಗಿರುವ 52 ಕಾರ್ಯಕರ್ತೆಯರ ಪೈಕಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಳಿದ 51 ಮಹಿಳೆಯರ ಪಟ್ಟಿಯನ್ನು ರಿಲೀಸ್ ಮಾಡುವುದಾಗಿ ತಿಳಿಸಿದ್ದಾರೆ. ಪಂಜಾಬ್ ಚುನಾವಣೆ ಹತ್ತಿರವಿರುವಾಗಲೇ ಪಕ್ಷಕ್ಕೆ ಲೈಂಗಿಕ ಹಗರಣ ಸುತ್ತಿಕೊಳ್ಳುತ್ತಿರುವುದು ಅರವಿಂದ್ ಕೇಜ್ರಿವಾಲ್ ಗೆ ತಲೆನೋವಾಗಿ ಪರಿಣಮಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...