alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿಯನ್ನು ತಬ್ಬಿಕೊಳ್ಳಲು ಮಾಲ್ ನಲ್ಲಿ ಕ್ಯೂ ನಿಂತ ಜನ

ಪರಸ್ಪರ ಹಸ್ತಲಾಘವ ಮಾಡಿ ನಂತ್ರ ತಬ್ಬಿಕೊಂಡು ಶುಭ ಕೋರುವುದು ಹಳೆಯ ಪದ್ಧತಿ. ಹುಡುಗ್ರನ್ನು ತಬ್ಬಿಕೊಳ್ಳಲು ಹುಡುಗಿ ಮುಂದಾದ್ರೆ ಪರಿಸ್ಥಿತಿ ಹೇಗಿರಬೇಡ. ಮುರಾದಾಬಾದ್ ನಲ್ಲಿ ನೀವು ಊಹಿಸಿದಂತೆ ಆಗಿದೆ. ಮಾಲ್ ಮುಂದೆ ಪರಸ್ಪರ ತಬ್ಬಿಕೊಂಡು ಹುಡುಗಿ ಶುಭಕೋರಿದ್ದಾಳೆ. ಆಕೆಗೆ ಶುಭಕೋರಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇದ್ರ ವಿಡಿಯೋ ಈಗ ವೈರಲ್ ಆಗಿದೆ.

ವಿಡಿಯೋ ನೋಡಿದ ಜನರು ಈಗ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ವೇವ್ ಸಿನಿಮಾ ಮಾಲ್ ನಲ್ಲಿ ಹುಡುಗಿ ಜನರನ್ನು ತಬ್ಬಿಕೊಂಡು ಶುಭ ಕೋರಿದ್ದಾಳೆ. ಪಕ್ಕದಲ್ಲಿ ನಿಂತಿದ್ದ ಸ್ನೇಹಿತೆಯರು ಎಷ್ಟು ಜನರನ್ನು ಹುಡುಗಿ ತಬ್ಬಿಕೊಂಡಿದ್ದಾಳೆಂಬುದನ್ನು ಲೆಕ್ಕ ಹಾಕುತ್ತಿದ್ದಾರೆ. ಕೆಲವರು ವಿಡಿಯೋ ಮಾಡ್ತಿದ್ದಾರೆ.

ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಮಾಲ್ ಸಿಬ್ಬಂದಿ ಮಾಲ್ ಮಾಲೀಕರಿಗೆ ಕರೆ ಮಾಡಿ ಈ ಸಂಗತಿ ತಿಳಿಸಿದ್ರಂತೆ. ತಕ್ಷಣ ಅಲ್ಲಿಗೆ ಬಂದ ಮಾಲೀಕ ಜನರನ್ನು ಹೊರಗೆ ಕಳುಹಿಸಿದ್ದನಂತೆ. ಹುಡುಗಿ ಕೂಡ ಅಲ್ಲಿಂದ ಹೋಗಿದ್ದಾಳಂತೆ. ಆದ್ರೆ ಹುಡುಗಿ ಯಾರು? ಯಾಕೆ ಹೀಗೆ ಮಾಡಿದ್ದಾಳೆಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...