alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗನಾಟಕ್ಕೆ ವ್ಯಕ್ತಿ ಬಲಿ…! ಮಂಗನ ವಿರುದ್ಧವೇ ಪ್ರಕರಣ ದಾಖಲು

ಕೋತಿಗಳು ಮಾಡುವ ಚೇಷ್ಟೆಗಳಿಂದ ಏನೆಲ್ಲ ತೊಂದರೆಯಾಗುತ್ತದೆ ಎನ್ನುವುದು ಹೇಳಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಕೋತಿಗಳ ಗುಂಪು ಮಾಡಿರುವ ಅತಿರೇಕಕ್ಕೆ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಟಿಕ್ರಿ ಎಂಬ ಗ್ರಾಮದಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಸುಮಾರು 20 ಕೋತಿಗಳ ಗುಂಪೊಂದು 72 ವರ್ಷದ ವೃದ್ಧನ ಮೇಲೆ ಸುಮಾರು 20 ಕ್ಕೂ ಹೆಚ್ಚು ಇಟ್ಟಿಗೆಗಳನ್ನು ಎಸೆಯುವ ಮೂಲಕ ತೀವ್ರ ಗಾಯಗೊಳಿಸಿವೆ. ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದರೂ, ಗಾಯದ ತೀವ್ರತೆಯಿಂದ ಗುರುವಾರ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಮೃತ ವೃದ್ಧನನ್ನು 72 ವರ್ಷದ ಧರ್ಮಪಾಲ್ ಸಿಂಗ್ ಎಂದು ಗುರುತಿಸಲಾಗಿದ್ದು, ವೃದ್ಧ ಒಣ ಕಟ್ಟಿಗೆಯನ್ನು ಸಂಗ್ರಹಿಸಲು ತೆರಳಿದ್ದಾಗ ಮಂಗಗಳು ವೃದ್ಧನ ಮೇಲೆ ಇಟ್ಟಿಗೆ ತೂರಿವೆ. ಆದರೆ ಈ ರೀತಿ ಮಾಡಲು ಕಾರಣವೇನು ಎನ್ನುವುದು ಮಾತ್ರ ತಿಳಿದಿಲ್ಲ. ಮೃತರ ಸಂಬಂಧಿಕರು ಕೋತಿಗಳ ವಿರುದ್ಧ ದೂರು ದಾಖಲಿಸಿದ್ದರೂ, ಪೊಲೀಸರು ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿಲ್ಲ ಎಂದು ತಿಳಿದುಬಂದಿದೆ.

ಈ ಬಗ್ಗೆ ಸ್ಥಳೀಯರು ಮಾತನಾಡಿದ್ದು, ಗ್ರಾಮದಲ್ಲಿ ಕೋತಿಗಳ ಉಪಟಳ ಹೆಚ್ಚಾಗಿದೆ. ಈ ರೀತಿಯ ಘಟನೆ ಇದೇ ಮೊದಲ ಬಾರಿಗೆ ನಡೆದಿದ್ದರೂ, ಪ್ರತಿನಿತ್ಯ ಒಂದಿಲ್ಲೊಂದು ತೊಂದರೆಯನ್ನು ಈ ಕೋತಿಗಳ ಗುಂಪು ನೀಡುತಿರುತ್ತವೆ ಎಂದು ಆರೋಪಿಸಿದ್ದಾರೆ. ಧರ್ಮಪಾಲ್ ಸಹೋದರ ಕೃಷ್ಣಪಾಲ್ ಸಿಂಗ್ ಪ್ರಕಾರ, ಧರ್ಮಪಾಲ್ ಮೇಲೆ 20ಕ್ಕೂ ಹೆಚ್ಚು ಇಟ್ಟಿಗೆಗಳನ್ನು ಎಸೆದಿದ್ದು, ಇದರಿಂದ ತಲೆ ಹಾಗೂ ಎದೆ ಭಾಗದಲ್ಲಿ ತೀವ್ರ ಗಾಯಗಳಾಗಿವೆ. ಆದ್ದರಿಂದ ಸಹೋದರ ಮೃತಪಟ್ಟಿದ್ದು, ಈ ಕೃತ್ಯ ಎಸಗಿರುವ ಕೋತಿಗಳಿಗೆ ತಕ್ಕ ಶಾಸ್ತಿಯಾಗಬೇಕೆಂದು ಆಗ್ರಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...