alex Certify
ಕನ್ನಡ ದುನಿಯಾ       Mobile App
       

Kannada Duniya

ಕೋತಿಗಳಿಂದ ಕಚ್ಚಾ ಬಾಂಬ್ ದಾಳಿ: ಮೂವರಿಗೆ ಗಾಯ

ಕೋತಿಗಳು ಎಸೆದ ಪಾಲಿಥಿನ್ ಕವರ್ನಲ್ಲಿದ್ದ ವಸ್ತುಗಳು ಕಚ್ಚಾ ಬಾಂಬ್ ನಂತೆ ಸ್ಫೋಟಗೊಂಡ ಪರಿಣಾಮ ಒಂದು ಮಗು ಸೇರಿದಂತೆ ಮೂರು ಮಂದಿ ಗಾಯಗೊಂಡಿರುವ ಘಟನೆ ಕಾನ್ಪುರದ ಫತೇಪುರ್ನಲ್ಲಿ ನಡೆದಿದೆ.

ಕವರ್ ನಲ್ಲಿದ್ದ ಸ್ಫೋಟಕದ ವಸ್ತುಗಳು ನೆಲಕ್ಕೆ ಅಪ್ಪಳಿಸಿದ ಪರಿಣಾಮ ಸಂಭವಿಸಿದ ಸ್ಫೋಟದಿಂದಾಗಿ ಈ ಘಟನೆ ನಡೆದಿದೆ. 60 ವರ್ಷದ ಗುಲಾಬ್ ಗುಪ್ತಾ ಎಂಬ ವ್ಯಕ್ತಿ ಮೊಮ್ಮಗ ಸಾಮ್ರಾಟ್ ನೊಂದಿಗೆ ಶಾಲೆಯ ಬಸ್ ಗೆ ಕಾಯುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ.

ಸ್ಫೋಟ ಸಂಭವಿಸಿದ ಕೂಡಲೇ ಗಾಯಾಳುಗಳನ್ನ ಸ್ಥಳೀಯರೇ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆಗೂ ಮಾಹಿತಿ ನೀಡಿದ್ದಾರೆ. ಅದೃಷ್ಟವಶಾತ್ ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದು , 5 ವರ್ಷದ ಮಗು ಸಾಮ್ರಾಟ್ ಗೆ ಹೆಚ್ಚಿನ ಪ್ರಮಾಣದಲ್ಲಿ ಸುಟ್ಟ ಗಾಯಗಳಾಗಿದೆ.

ಕಸದ ತೊಟ್ಟಿಯೊಂದರಲ್ಲಿ ಸಿಕ್ಕ ವಸ್ತುಗಳನ್ನ ಕೋತಿಗಳು ಎತ್ತಿಕೊಂಡು ಹೋಗಿ ಮನೆಯೊಂದರ ಟೆರೇಸ್ ನಲ್ಲಿ ಆಟವಾಡುತ್ತಿದ್ದವು. ಆ ವೇಳೆಯಲ್ಲಿ ಚೀಲದಲ್ಲಿದ್ದ ವಸ್ತುಗಳು ನೆಲಕ್ಕೆ ಬಿದ್ದ ಪರಿಣಾಮ ಸ್ಫೋಟ ಸಂಭವಿಸಿದೆ ಅಂತ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಸ್ಥಳೀಯ ಪೊಲೀಸರು ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಅರಣ್ಯ ಇಲಾಖೆಗೆ ಕೋತಿಗಳನ್ನ ಹಿಡಿದು ಕಾಡಿಗೆ ಬಿಡುವಂತೆ ಸೂಚನೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...