alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿ ಕೈಯಿಂದ ಎರಡು ಲಕ್ಷ ರೂ. ಕಸಿದುಕೊಂಡು ಪರಾರಿಯಾದ ಮಂಗ…!

ಉತ್ತರಪ್ರದೇಶದ ಆಗ್ರಾದಲ್ಲಿ ಬ್ಯಾಂಕಿಗೆ ಕಟ್ಟಲೆಂದು ಹಣ ತೆಗೆದುಕೊಂಡು ಹೋಗುತ್ತಿದ್ದ ಹುಡುಗಿಯ ಕೈಯಿಂದ ಎರಡು ಲಕ್ಷ ರೂ.ಗಳನ್ನು ಕಸಿದುಕೊಂಡು ಮಂಗವೊಂದು ಪರಾರಿಯಾಗಿದೆ. ಯಾವ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬೇಕು ಎಂಬ ಗೊಂದಲದಲ್ಲಿ ಈಗ ಪೊಲೀಸರಿದ್ದಾರೆ.

ಸೋಮವಾರದಂದು ಬೆಳಗ್ಗೆ 10.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ವಿಜಯ್ ಬನ್ಸಾಲ್ ಎಂಬವರು ತಮ್ಮ ಪುತ್ರಿ 17 ವರ್ಷದ ನ್ಯಾನ್ಸಿ ಜೊತೆ ಬ್ಯಾಂಕಿಗೆ ಹಣ ಕಟ್ಟಲೆಂದು ತೆರಳಿದ್ದರು.

ಎರಡು ಲಕ್ಷ ರೂ. ಹಣವಿದ್ದ ಬ್ಯಾಗನ್ನು ನ್ಯಾನ್ಸಿ ಹಿಡಿದುಕೊಂಡಿದ್ದಳು. ತಂದೆ-ಮಗಳು ಇಂಡಿಯನ್ ಓವರ್ಸೀಸ್ ಬ್ಯಾಂಕ್ ನ ಮಹಡಿ ಏರುವ ವೇಳೆ ಹಠಾತ್ತಾಗಿ ಬಂದ ಮಂಗವೊಂದು ನ್ಯಾನ್ಸಿ ಕೈಯಲ್ಲಿದ್ದ ಹಣದ  ಬ್ಯಾಗನ್ನು ಕಸಿದುಕೊಂಡಿದೆ.

ಇದರಿಂದ ಕಂಗಾಲಾದ ತಂದೆ-ಮಗಳು ಹಣ ಪಡೆಯಲು ಮಂಗನ ಬೆನ್ನತ್ತಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಮಧ್ಯೆ ಬ್ಯಾಗ್ ಹರಿದುಹಾಕಿದ ಮಂಗ ಅದರೊಳಗಿದ್ದ 60,000 ರೂ. ನೋಟುಗಳನ್ನು ಎಸೆದಿದ್ದು, ಅದನ್ನು ಆರಿಸಿಕೊಳ್ಳಲಾಗಿದೆ. ಉಳಿದ ಹಣ ಪಡೆಯಲು ಮಂಗಕ್ಕೆ ಆಹಾರದ ಆಮಿಷ ಒಡ್ಡಿದರೂ ಪ್ರಯೋಜನವಾಗಿಲ್ಲ. ಇದೀಗ ವಿಜಯ್ ಬನ್ಸಾಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯಾವ ಕಲಂ ಅಡಿ ಪ್ರಕರಣ ದಾಖಲಿಸಬೇಕೆಂಬ ಗೊಂದಲ ಪೊಲೀಸರನ್ನು ಕಾಡುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...