alex Certify
ಕನ್ನಡ ದುನಿಯಾ       Mobile App
       

Kannada Duniya

ಮೃತ ಸ್ನೇಹಿತನನ್ನು ಬದುಕಿಸಲು 2 ಗಂಟೆ ಹೋರಾಡಿದ ವಾನರ

ಕಾಲ ಬದಲಾದಂತೆ ಮನುಷ್ಯ ಬದಲಾಗ್ತಿದ್ದಾನೆ. ಮನುಷ್ಯನಲ್ಲಿ ಮಾನವೀಯತೆ, ಪ್ರೀತಿ ಸಾಯುತ್ತಿದೆ. ಆದ್ರೆ ಮೂಕ ಪ್ರಾಣಿಗಳಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ಹಿಂದಿನಂತೆ ಈಗ್ಲೂ ತಮ್ಮವರನ್ನು ಉಳಿಸಿಕೊಳ್ಳಲು ಅವು ಹೋರಾಡುತ್ತವೆ. ಇದಕ್ಕೆ ಮಧ್ಯಪ್ರದೇಶದಲ್ಲಿ ನಡೆದ ಒಂದು ಘಟನೆ ಉತ್ತಮ ಉದಾಹರಣೆ.

ಮಧ್ಯಪ್ರದೇಶದ ಖರಗೊನಾದಲ್ಲಿ ಮಂಗವೊಂದು ಸಾವನ್ನಪ್ಪಿತ್ತು. ಮಂಗನನ್ನು ಕಳೆದುಕೊಂಡ ಸ್ನೇಹಿತರು ಕಂಗಾಲಾಗಿದ್ದರು. ಒಂದು ಮಂಗ ಸ್ನೇಹಿತನನ್ನು ಉಳಿಸಲು ಶತಾಯ-ಗತಾಯ ಪ್ರಯತ್ನ ನಡೆಸಿತು. ಸುಮಾರು 2 ಗಂಟೆಗಳ ಕಾಲ ಮಂಗನಿಗೆ ಥೆರಪಿ ನೀಡಿತು.

ಕೈ, ಕಾಲು ತಿಕ್ಕುವ ಜೊತೆಗೆ ಬಾಯಿಗೆ ಉಸಿರು ನೀಡುವ ಯತ್ನ ನಡೆಸಿದೆ. ಇಷ್ಟೇ ಅಲ್ಲ ಹಾರ್ಟ್ ಪಂಪಿಂಗ್ ಕೂಡ ಮಾಡಿದೆ. ಆದ್ರೆ ಮೃತ ಮಂಗ ಬದುಕಿ ಬರಲಿಲ್ಲ. ಮಂಗಗಳ ಈ ಮೂಕ ರೋಧನೆ ನೋಡಿ ಗ್ರಾಮಸ್ಥರ ಕಣ್ಣಲ್ಲಿ ನೀರು ಬಂದಿತ್ತು. ಉಳಿದ ಮಂಗಗಳ ನೋವು ನೋಡಿದ ಗ್ರಾಮಸ್ಥರು ಮೃತ ಮಂಗಕ್ಕೆ ವಿಧಿ, ವಿಧಾನದ ಮೂಲಕ ಅಂತ್ಯಸಂಸ್ಕಾರ ಮಾಡಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...