alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಗ್ರಿ ಪಡೆದ ತಕ್ಷಣ ಸನ್ಯಾಸಿಯಾಗಿ ಪಾಲಕರನ್ನು ಸಂಕಷ್ಟಕ್ಕೆ ನೂಕಿದ ಇಂಜಿನಿಯರ್

ಇತ್ತೀಚಿನ ದಿನಗಳಲ್ಲಿ ವಿದ್ಯಾವಂತ ಯುವಕರು ಸನ್ಯಾಸ ದೀಕ್ಷೆ ಸ್ವೀಕರಿಸುತ್ತಿರುವ ಪ್ರಕರಣ ಹೆಚ್ಚಾಗ್ತಿದೆ. ಅಹಮದಾಬಾದ್ ನಲ್ಲಿ ಇಂಜಿನಿಯರ್ ವಿದ್ಯಾರ್ಥಿಯೊಬ್ಬ ಡಿಗ್ರಿ ಪಡೆದ ತಕ್ಷಣ ಸನ್ಯಾಸಿ ದೀಕ್ಷೆ ಪಡೆದಿದ್ದಾನೆ. ಇಸ್ಕಾನ್ ದೇವಾಲಯದಲ್ಲಿ ಕಳೆದ ಮೂರು ವರ್ಷಗಳಿಂದ ಸನ್ಯಾಸಿಯಾಗಿ ಜೀವನ ನಡೆಸುತ್ತಿದ್ದಾನೆ.

ಇಂಜಿನಿಯರಿಂಗ್ ಡಿಗ್ರಿ ಪಡೆದ ಒಬ್ಬನೇ ಮಗ ಸಾಮಾನ್ಯ ಜೀವನ ನಡೆಸಲಿ ಎಂಬುದು ತಂದೆ-ತಾಯಿ ಆಶಯ. ಆದ್ರೆ ಮಗ ಮನೆಗೆ ಬರುವ ಮನಸ್ಸು ಮಾಡ್ತಿಲ್ಲ. ಮೂರು ವರ್ಷಗಳಿಂದ ಇಸ್ಕಾನ್ ದೇವಸ್ಥಾನಕ್ಕೆ ಅಲೆಯುತ್ತಿರುವ ಪಾಲಕರು, ಮಗನನ್ನು ಪರಿಪರಿಯಾಗಿ ಬೇಡ್ತಿದ್ದಾರೆ. ಆದ್ರೆ ಮಗ ಮಾತ್ರ ಮನಸ್ಸು ಬದಲಿಸುತ್ತಿಲ್ಲ.

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪೊಲೀಸ್ ಮುಂದೆ ಹಾಜರಾದ ಮಗ, ತಾಯಿಯ ಕಣ್ಣೀರಿಗೂ ಕರಗಲಿಲ್ಲ. ದೇವಸ್ಥಾನದಲ್ಲಿದ್ದು, ದೇವರ ಸೇವೆ ಮಾಡುತ್ತೇನೆ ಎನ್ನುತ್ತಿದ್ದಾನೆ. ಮಗನ ಮನಸ್ಸನ್ನು ದೇವಸ್ಥಾನದ ಜನರು ಬದಲಿಸಿದ್ದಾರೆಂದು ಪಾಲಕರು ಆರೋಪಿಸಿದ್ದಾರೆ. ಆದ್ರೆ ಪೊಲೀಸರು ಮಾತ್ರ ಕೈಚೆಲ್ಲಿ ಕುಳಿತಿದ್ದಾರೆ. ದಿಶಾಂತ್ ಗೆ ಒತ್ತಾಯ ಮಾಡಲು ಸಾಧ್ಯವಿಲ್ಲ. ಆತ ವಯಸ್ಕನಾಗಿರುವ ಕಾರಣ ಆತನ ನಿರ್ಧಾರವೇ ಅಂತಿಮವೆಂದು ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...