alex Certify
ಕನ್ನಡ ದುನಿಯಾ       Mobile App
       

Kannada Duniya

ಬೆತ್ತಲಾಗಿ ಬಿದ್ದಿತ್ತು ಉದ್ಯಮಿ ಮೋನಿಕಾ ಶವ

monika-gudd

ಗೋವಾ: ಖ್ಯಾತ ಉದ್ಯಮಿ ಮೇಲೆ ಅತ್ಯಾಚಾರ ಎಸಗಿ, ಭೀಕರವಾಗಿ ಕೊಲೆ ಮಾಡಿರುವ ಘಟನೆ ಗೋವಾದ ಅಪಾರ್ಟ್ ಮೆಂಟ್ ಒಂದರಲ್ಲಿ ನಡೆದಿದೆ.

ಉದ್ಯಮಿ ಮೋನಿಕಾ ಘುರ್ಡೆ ಕೊಲೆಯಾದವರು. ದೇಶದಲ್ಲಿಯೇ ಅತ್ಯುತ್ತಮ ಸುಗಂಧ ದ್ರವ್ಯ ಉತ್ಪಾದಕಿ ಎಂದು ಹೆಸರು ಮಾಡಿದ್ದ ಮೋನಿಕಾ, ಗೋವಾದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದರು. ಅವರು ಗೋವಾದವರಾದರೂ ಚೆನ್ನೈನಲ್ಲಿ ಉದ್ಯಮ ಆರಂಭಿಸಿ ಯಶಸ್ಸು ಕಂಡಿದ್ದರು. ಫೋಟೋ ಗ್ರಾಫರ್ ಮತ್ತು ಗ್ರಾಫಿಕ್ ಡಿಸೈನರ್ ಆಗಿಯೂ ಮೋನಿಕಾ ಕೆಲಸ ಮಾಡಿದ್ದಾರೆ.

ಸುಗಂಧ ದ್ರವ್ಯ ಉತ್ಪಾದನೆಯಲ್ಲಿ ಮೋನಿಕಾ ಯಶಸ್ವಿಯಾಗಿ ಮುನ್ನಡೆದಿದ್ದರು. ಅವರು ಮನೆಯಲ್ಲಿದ್ದ ಸಂದರ್ಭದಲ್ಲಿ ಒಳ ನುಗ್ಗಿದ ದುಷ್ಕರ್ಮಿಗಳು ದರೋಡೆ ನಡೆಸಿದ್ದು, ಬಳಿಕ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಅವರ ಕೈಕಾಲುಗಳನ್ನು ಕಟ್ಟಿ ಹಾಕಿ ಬೆತ್ತಲೆಗೊಳಿಸಿ ಅತ್ಯಾಚಾರ ಎಸಗಲಾಗಿದೆ. ದೇಹದ ಮೇಲೆ ಗಾಯದ ಗುರುತು ಕಂಡು ಬಂದಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...