alex Certify
ಕನ್ನಡ ದುನಿಯಾ       Mobile App
       

Kannada Duniya

ಸುಟ್ಟು ಕರಕಲಾಯಿತು ಲಕ್ಷಾಂತರ ರೂಪಾಯಿ..!

money burntಹರಿಯಾಣದ ಫರೀದಾಬಾದ್ ನ ಎಸ್ ಬಿ ಐ ಎಟಿಎಂ ಯಂತ್ರದಲ್ಲಿದ್ದ ಸುಮಾರು 18 ಲಕ್ಷ ರೂಪಾಯಿ ಸುಟ್ಟು ಕರಕಲಾದ ಘಟನೆ ಗುರುವಾರ ರಾತ್ರಿ ನಡೆದಿದೆ.

ಗುರುವಾರ ರಾತ್ರಿ ಅಗ್ರಸೇನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಎಸ್ ಬಿ ಐ ಎಟಿಎಂ ನ ಕಾವಲುಗಾರ ಮೊಹ್ಮದ್ ಹನೀಫ್, ರಾತ್ರಿ ಸುಮಾರು 10 ಗಂಟೆಗೆ ಮನೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಎಟಿಎಂ ಮಶಿನ್ ಸುಟ್ಟು ಕರಕಲಾಗಿತ್ತು. ಶುಕ್ರವಾರ ಮುಂಜಾನೆ ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಈ ವಿಷಯ ತಿಳಿಸಿದ್ದ.

ಸ್ಥಳದ ಪರಿಶೀಲನೆ ನಡೆಸಿದ ಪೊಲೀಸರು, ಯಾವುದೇ ಕಾವಲು ಇರದ ಕಾರಣ ಎಟಿಎಂ ಗೆ ನುಗ್ಗಿದ ಕಳ್ಳರ ಗುಂಪು ಗ್ಲಾಸ್ ಕಟರ್ ನಿಂದ ಲಾಕರ್ ಓಪನ್ ಮಾಡಲು ಪ್ರಯತ್ನಿಸಿದ್ದಾರೆ. ಆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಎಟಿಎಂ ಗೆ ಬೆಂಕಿ ತಗುಲಿರಬಹುದು ಎಂದು ಹೇಳಿದ್ದಾರೆ.

ಬೆಂಕಿ ತಗುಲಿದ ತಕ್ಷಣ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ಎಟಿಎಂ ಯಂತ್ರದಲ್ಲಿದ್ದ ಸುಮಾರು 18 ಲಕ್ಷದ 13 ಸಾವಿರ ರೂಪಾಯಿ ಬೆಂಕಿಗೆ ಆಹುತಿಯಾಗಿದೆ. ಎಟಿಎಂ ಗಳಲ್ಲಿ ಸರಿಯಾದ ಸುರಕ್ಷತೆಯಿರದ ಕಾರಣ ಇಂತಹ ಪ್ರಕರಣಗಳು ನಡೆಯುತ್ತಿದೆ. ಹಾಗಾಗಿ ಎಟಿಎಂ ಗೆ ಸೂಕ್ತ ಭದ್ರತೆ ಒದಗಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...