alex Certify
ಕನ್ನಡ ದುನಿಯಾ       Mobile App
       

Kannada Duniya

ಮಗುವಿನ ಬಣ್ಣ ಬದಲಿಸಲು ಕಲ್ಲಿನಿಂದ ಉಜ್ಜಿದ್ಲು ತಾಯಿ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ವಿಚಿತ್ರ ಘಟನೆ ನಡೆದಿದೆ. ತಾಯಿಯೊಬ್ಬಳು ಮಗ ಬೆಳ್ಳಗಾಗ್ಲಿ ಎನ್ನುವ ಕಾರಣಕ್ಕೆ ಕಲ್ಲಿನಿಂದ ಮಗನ ದೇಹವನ್ನು ಉಜ್ಜಿದ್ದಾಳೆ. ಮಗುವಿನ ಇಡೀ ದೇಹಕ್ಕೆ ಗಾಯಗಳಾಗಿವೆ. ಸ್ಥಳೀಯರೊಬ್ಬರು ಪೊಲೀಸರಿಗೆ ಫೋನ್ ಮಾಡಿ ಈ ಬಗ್ಗೆ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ವರದಿ ಪ್ರಕಾರ, ಆರೋಪಿ ಸುಧಾ ಖಾಸಗಿ ಶಾಲೆಯೊಂದರ ಶಿಕ್ಷಕಿ. ಸುಧಾ ಮಗುವನ್ನು ಉತ್ತರ ಪ್ರದೇಶದ ಮಾತೃ ಛಾಯಾದಿಂದ ಕಳೆದ ಒಂದು ವರ್ಷಗಳ ಹಿಂದೆ ದತ್ತು ಪಡೆದಿದ್ದಳು. ಭೋಪಾಲದಲ್ಲಿ ವಾಸವಾಗಿರುವ ಮಹಿಳೆಗೆ ಆರಂಭದಿಂದಲೂ ಮಗುವಿನ ಬಣ್ಣದ ಬಗ್ಗೆ ಬೇಸರವಿತ್ತು. ಮಗು ಬೆಳ್ಳಗಾಗಲು ಸಾಕಷ್ಟು ಪ್ರಯತ್ನ ಮಾಡಿದ್ದಾಳೆ.

ಆಕೆಗೆ ಯಾರೋ ಬಣ್ಣ ಬೆಳ್ಳಗಾಗಲು ಮಗುವಿಗೆ ಕಪ್ಪು ಕಲ್ಲಿನಿಂದ ಉಜ್ಜುವಂತೆ ಸಲಹೆ ನೀಡಿದ್ದಾರೆ. ನಂತ್ರ ಮಗುವಿಗೆ ಕಲ್ಲಿನಿಂದ ಉಜ್ಜಲು ಶುರು ಮಾಡಿದ್ದಾಳೆ. ಇದ್ರಿಂದ ಮಗುವಿನ ದೇಹವೆಲ್ಲ ಗಾಯವಾಗಿದೆ. ದೂರಿನ ನಂತ್ರ ಮಗುವನ್ನು ವಶಕ್ಕೆ ಪಡೆದ ಪೊಲೀಸರು ಮಗುವನ್ನು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...