alex Certify
ಕನ್ನಡ ದುನಿಯಾ       Mobile App
       

Kannada Duniya

5 ಸ್ಟಾರ್ ಹೊಟೇಲ್ ಸಿಸಿ ಟಿವಿಯಲ್ಲಿ ಸೆರೆಯಾಯ್ತು ಈ ದೃಶ್ಯ

molestation_650x400_41503035067

ದೆಹಲಿಯ ಪಂಚತಾರಾ ಹೊಟೇಲ್ ನಲ್ಲಿ ನಡೆದ ಘಟನೆಯೊಂದು ಚರ್ಚೆಗೆ ಕಾರಣವಾಗಿದೆ. ಸಿಸಿ ಟಿವಿ ದೃಶ್ಯಾವಳಿಗಳು ಕಾಮುಕನೊಬ್ಬನ ಬಣ್ಣ ಬಯಲು ಮಾಡಿದೆ. ಹೊಟೇಲ್ ನ ಸೆಕ್ಯೂರಿಟಿ ಮ್ಯಾನೇಜರ್ ಪವನ್ ಹೊಟೇಲ್ ನಲ್ಲಿ ಕೆಲಸ ಮಾಡುವ ಮಹಿಳೆ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ.

ಮಹಿಳೆ ಸೀರೆ ಸೆರಗು ಎಳೆದು ಆಕೆ ಬಟ್ಟೆ ಬಿಚ್ಚುವ ಪ್ರಯತ್ನ ಮಾಡಿದ್ದಾನೆ ಪವನ್. ಈ ವೇಳೆ ಪವನ್ ಜೊತೆ ಆತನ ಆಪ್ತ ಕೂಡ ಇರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. 33 ವರ್ಷದ ಪೀಡಿತ ಮಹಿಳೆ ಕಳೆದ ಎರಡು ವರ್ಷಗಳಿಂದ ಈ ಹೊಟೇಲ್ ನಲ್ಲಿ ಕೆಲಸ ಮಾಡ್ತಿದ್ದಾಳೆ. ಕಳೆದ ಕೆಲ ತಿಂಗಳುಗಳಿಂದ ಪವನ್, ಮಹಿಳೆ ಹಿಂದೆ ಬಿದ್ದಿದ್ದಾನಂತೆ.

ಜುಲೈ 29ರಂದು ಮಹಿಳೆ ಹುಟ್ಟುಹಬ್ಬವಿತ್ತಂತೆ. ಈ ವೇಳೆ ಪವನ್ ತನ್ನ ರೂಂಗೆ ಕರೆದು ಆಕೆ ಸೆರಗು ಎಳೆಯಲು ಯತ್ನಿಸಿದ್ದಾನಂತೆ. ಹೊಟೇಲ್ ಕೋಣೆಯಲ್ಲಿ ಒಂದು ರಾತ್ರಿ ತನ್ನ ಜೊತೆಗಿರುವಂತೆ ಹೇಳಿದ್ದ ಪವನ್ ಉಡುಗೊರೆಯ ಆಸೆ ತೋರಿಸಿದ್ದ. ಹೊಟೇಲ್ ನಿಂದ ಹೊರಬಂದ ಮಹಿಳೆಯನ್ನು ಕಾರ್ ನಲ್ಲಿ ಕರೆದೊಯ್ಯಲೂ ಪವನ್ ಯತ್ನಿಸಿದ್ದಾನೆ. ಹೊಟೇಲ್ ಹೆಚ್ ಆರ್ ಟೀಂಗೆ ಕರೆ ಮಾಡಿ ವಿಷ್ಯ ತಿಳಿಸಿದ್ದಳು ಮಹಿಳೆ. ಆದ್ರೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ನಂತ್ರ ಪತಿಗೆ ಹೇಳಿದ್ದಾಳೆ. ಪತಿ ಜೊತೆ ಆಗಸ್ಟ್ 1 ರಂದು ದೂರು ದಾಖಲಿಸಿದ್ದಾಳೆ. ಆಗಸ್ಟ್ 17ರಂದು ಸಿಸಿ ಟಿವಿ ದೃಶ್ಯವನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...