alex Certify
ಕನ್ನಡ ದುನಿಯಾ       Mobile App
       

Kannada Duniya

Freedom251 ವಿವಾದದ ಬಗ್ಗೆ ಮಾತನಾಡಿದ ಎಂಡಿ ಮೋಹಿತ್ ಗೋಯಲ್

mohit

Freedom251 ಸ್ಮಾರ್ಟ್ ಫೋನ್ ವಿಶ್ವದ ಅತ್ಯಂತ ಅಗ್ಗದ ಫೋನ್. ಸಾವಿರಾರು ಮಂದಿ ಈಗಾಗಲೇ ಈ ಫೋನ್ ಬುಕ್ ಮಾಡಿ ಕುಳಿತಿದ್ದಾರೆ. ಈ ನಡುವೆ ಬೆಲೆ ವಿಚಾರಕ್ಕೆ ಫೋನ್ ಬಗ್ಗೆ ಚರ್ಚೆಯಾಗುತ್ತಲೇ ಇದೆ. ಅನೇಕ ವಿವಾದಗಳೂ ಎದ್ದಿವೆ. ಈ ಎಲ್ಲ ವಿವಾದದ ಬಗ್ಗೆ Freedom251 ಸ್ಮಾರ್ಟ್ ಫೋನ್ ತಯಾರಕ ಕಂಪನಿ ರಿಂಗಿಂಗ್ ಬೆಲ್ ಎಂಡಿ ಮೋಹಿತ್ ಗೋಯಲ್ ಮಾತನಾಡಿದ್ದಾರೆ. ಸ್ಮಾರ್ಟ್ ಫೋನನ್ನು ಕಡಿಮೆ ಬೆಲೆಗೆ ಮಾರಿಯೂ ನನಗೆ 31 ರೂಪಾಯಿ ಲಾಭವಾಗ್ತಿದೆ ಎಂದಿದ್ದಾರೆ.

ಭಾರತೀಯ ಸೆಲ್ಯುಲರ್ ಅಸೋಸಿಯೇಷನ್4100 ಹಾಗೂ ಟೆಲಿಕಾಂ ಸಚಿವಾಲಯ 2300 ರೂಪಾಯಿ ಎಂದು ಹೇಳಿತ್ತು. ಇಂಗ್ಲೀಷ್ ಪತ್ರಿಕೆಯೊಂದರ ಸಂದರ್ಶನದಲ್ಲಿ ಮಾತನಾಡಿದ ಮೋಹಿತ್ ಗೋಯಲ್, ಯಾವ ಬೆಲೆಯನ್ನು ಗ್ರಾಹಕರಿಗೆ ಹೇಳಿದ್ದೇವೋ ಅದೇ ಬೆಲೆಯಲ್ಲಿ ಗ್ರಾಹಕರಿಗೆ ನೀಡುವುದಾಗಿ ಹೇಳಿದ್ದಾರೆ. ನನಗೆ ಗೊತ್ತು ಇದು ರಾತ್ರೋರಾತ್ರಿ ಆಗುವಂತಹದ್ದಲ್ಲ. ಏಪ್ರಿಲ್ 15ರ ನಂತರ ಡಿಲೆವರಿ ಶುರುಮಾಡುವುದಾಗಿ ಭರವಸೆ ನೀಡಿದ್ದಾರೆ.

ಪೇಮೆಂಟ್ ಕಟ್ಟಿರುವ ಗ್ರಾಹಕರ ಹಣ ಖಾತೆಯಲ್ಲಿಯೇ ಇರುತ್ತದೆ. ಅದನ್ನು ತೆಗೆಯಲಾಗುವುದಿಲ್ಲ. ಡಿಲೆವರಿ ಆಗುವವರೆಗೆ ಅದನ್ನು ಬಳಸಲಾಗುವುದಿಲ್ಲ ಎಂದಿದ್ದಾರೆ ಮೋಹಿತ್. ವಿವಾದಗಳಿಂದ ನೋವಾಗಿಲ್ಲ ಎಂದಿರುವ ಮೋಹಿತ್, ನಾನು ತಪ್ಪು ಮಾಡಿಲ್ಲ, ಹಾಗಾಗಿ ನನಗೆ ನೋವಾಗುವುದಿಲ್ಲ ಎಂದಿದ್ದಾರೆ.

ನಾನು ಸರಿಯಾದ ದಾರಿಯಲ್ಲಿ ವ್ಯಾಪಾರ ಮಾಡಲು ಇಚ್ಛಿಸುತ್ತೇನೆ. ನನ್ನ ಬಳಿ ಬ್ಯುಸಿನೆಸ್ ಪ್ಲಾನ್ ಇದೆ ಎಂದಿದ್ದಾರೆ ಮೋಹಿತ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...