alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣಾ ಅಖಾಡಕ್ಕೆ ಇಳೀತಾರಾ ಮಾಲಿವುಡ್ ಸೂಪರ್ ಸ್ಟಾರ್…?

ಕೇರಳದ ತಿರುವುನಂತಪುರಂ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್ ಅವರ ವಿರುದ್ಧ ಮಲಯಾಳಂ ನಟ ಮೋಹನ್ ಲಾಲ್, ಬಿಜೆಪಿ ಪಕ್ಷದಿಂದ ಕಣಕ್ಕಿಳಿಯಲಿದ್ದಾರೆ ಅನ್ನೋ ಟಾಕ್ ಈಗ ಶುರುವಾಗಿದೆ. ಕೃಷ್ಣ ಜನ್ಮಾಷ್ಟಮಿಯ ಹಿನ್ನಲೆಯಲ್ಲಿ ಮಳಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಪ್ರಧಾನಿಯವರರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಆನಂತರದಲ್ಲಿ ಮೋಹನ್ ಲಾಲ್ ಬಿಜೆಪಿ ಪರವಾಗಿ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಅನ್ನೋ ಸುದ್ದಿ ಹಬ್ಬಿದೆ. ತಮ್ಮ ಸಾಮಾಜಿಕ ಕಾರ್ಯಗಳು ಮತ್ತು ಸಾಮಾಜಿಕ ಸಂಘಟನೆಯ ಬಗ್ಗೆ ಮಾತನಾಡೋಕೆ ಮೋಹನ್ ಲಾಲ್ ಪ್ರಧಾನಿಯವರನ್ನು ಭೇಟಿಯಾಗಿದ್ದರು. ಆದ್ರೆ ಈ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆಗಳು ನಡೆದಿಲ್ಲ ಅಂತ ಮೋಹನ್ ಲಾಲ್ ಆಪ್ತ ವಲಯ ಹೇಳ್ತಿದೆ.

ಗ್ಲೋಬಲ್ ಮಲಯಾಳಂ ರೌಂಡ್ ಟೇಬಲ್ ಕಾನ್ಫರೆನ್ಸ್ ಆಯೋಜಿಸುವ ಉದ್ದೇಶದೊಂದಿಗೆ ಮೋಹನ್ ಲಾಲ್ ಮತ್ತು ಮೋದಿ ಭೇಟಿ ನಡೆದಿದೆಯಂತೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ಸಂಪೂರ್ಣ ಬೆಂಬಲ ಕೊಡೋದಾಗಿ ಪ್ರಧಾನಿ ವಾಗ್ದಾನ ನೀಡಿದ್ದಾರಂತೆ.

ಪ್ರವಾಹದಿಂದ ಜರ್ಜರಿತವಾಗಿರುವ ಕೇರಳವನ್ನು ಮತ್ತೆ ಕಟ್ಟುವ ಬಗ್ಗೆಯೂ ಮಾತುಕತೆ ನಡೆಸಿದ್ದಾರಂತೆ. ಮೋಹನ್ ಲಾಲ್ ತಮ್ಮ ಸಂಘಟನೆಯ ಮೂಲಕ ಹೆಲ್ತ್ ಕ್ಯಾಂಪ್ ಆಯೋಜಿಸುತ್ತಿರುವ ಬಗ್ಗೆಯೂ ಮೋದಿ ಪ್ರಶಂಸೆ ವ್ಯಕ್ತಪಡಿಸಿದ್ದಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...