alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿ ವಿವಾದವಾಯ್ತು ಜೈಲೊಳಗಿನ ಸೆಲ್ಫಿ

shah

ಪಾಟ್ನಾ: ಕೊಲೆ ಆರೋಪದಲ್ಲಿ ಬಿಹಾರದ ಸಿವಾನ್ ಜೈಲಿನಲ್ಲಿರುವ, ಆರ್.ಜೆ.ಡಿ. ನಾಯಕ ಮೊಹಮ್ಮದ್ ಶಹಾಬುದ್ದೀನ್ ಅವರ, ಸೆಲ್ಫಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶಹಾಬುದ್ದೀನ್ ಅವರು ಜೈಲಲ್ಲಿ ತೆಗೆದುಕೊಂಡಿದ್ದಾರೆ ಎನ್ನಲಾಗಿರುವ ಸೆಲ್ಫಿ ಹರಿದಾಡುತ್ತಿರುವುದು ಗಮನಕ್ಕೆ ಬರುತ್ತಿದ್ದಂತೆ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಜೈಲಿನ ಮೇಲೆ ದಾಳಿ ಮಾಡಿದ್ದಾರೆ.

ದಾಳಿಯ ಸಂದರ್ಭದಲ್ಲಿ 3 ಮೊಬೈಲ್, 4 ಸಿಮ್ ಕಾರ್ಡ್ ಹಾಗೂ ಮೊಬೈಲ್ ಬ್ಯಾಟರಿ ಪತ್ತೆಯಾಗಿವೆ ಎಂದು ಮುಫಾಸಿಲ್ ಪೊಲೀಸ್ ಠಾಣೆ ಅಧಿಕಾರಿ ವಿನಯ್ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ಇದು ಶಹಾಬುದ್ದೀನ್ ತೆಗೆದುಕೊಂಡಿರುವ ಸೆಲ್ಫಿಯಲ್ಲ, ಬದಲಿಗೆ ಜೈಲಿಗೆ ಬಂದವರು ತೆಗೆದಿರುವ ಫೋಟೋ ಆಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...