alex Certify
ಕನ್ನಡ ದುನಿಯಾ       Mobile App
       

Kannada Duniya

ತೆಲಂಗಾಣದಲ್ಲಿ ಪ್ರಧಾನಿ ಮೋದಿ ಪತ್ನಿ….

jas

ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾಬೆನ್ ತೆಲಂಗಾಣದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ್ದಾರೆ. ವಿಕಾರಬಾದ್ ನಗರದ ನಾಗದೇವತೆ ದೇವಸ್ಥಾನಕ್ಕೆ ಅವರು ಭೇಟಿ ನೀಡಿದ್ದರು. ಇಲ್ಲಿ ಪೂಜೆ ಸಲ್ಲಿಸಿದ ಬಳಿಕ ಜಶೋದಾಬೆನ್ ಅನ್ನದಾನವನ್ನು ಕೂಡ ಮಾಡಿದ್ದಾರೆ.

ದೇವಾಲಯಕ್ಕೆ ಬಂದಿದ್ದ ಭಕ್ತರಿಗೆಲ್ಲ ಊಟ ವಿತರಿಸಿದ್ದಾರೆ. ನಂತರ ಅಲ್ಲಿನ ಸಂತೋಷಿಮಾತಾ ದೇವಾಲಯಕ್ಕೆ ತೆರಳಿದ್ದಾರೆ. ಅಲ್ಲಿ ಕೂಡ ಪೂಜೆ ಸಲ್ಲಿಸಿದ ನಂತರ ಜಶೋದಾಬೆನ್ ಗೋವುಗಳಿಗೆ ಮೇವು ನೀಡಿದ್ದಾರೆ.

126ನೇ ಜಯಂತಿ ಹಿನ್ನೆಲೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮೋದಿ ಪತ್ನಿ ಮಾಲಾರ್ಪಣೆ ಮಾಡಿದ್ರು. ಗುರುವಾರ ರಾತ್ರಿಯೇ ತೆಲಂಗಾಣಕ್ಕೆ ಆಗಮಿಸಿದ್ದ ಅವರು ನಾಗದೇವತೆ ದೇವಾಲಯದ ಅರ್ಚಕ ಬರಡಿ ರಮೇಶ್ ಅವರ ಮನೆಯಲ್ಲಿ ತಂಗಿದ್ದರು.

ಮೋದಿ ಪತ್ನಿ ತೆಲಂಗಾಣಕ್ಕೆ ಬಂದಿದ್ದಾರೆ ಅನ್ನೋ ಸುದ್ದಿ ಸಿಕ್ಕಿದ್ದೇ ತಡ ಬಿಜೆಪಿ ಮುಖಂಡರೆಲ್ಲ ಅವರನ್ನು ಭೇಟಿಯಾಗಲು ಧಾವಿಸಿ ಬಂದಿದ್ರು. ನಾಳೆ ಜಶೋದಾಬೆನ್ ಗುಜರಾತ್ ಗೆ ವಾಪಸ್ಸಾಗಲಿದ್ದಾರೆ ಎನ್ನಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...