alex Certify
ಕನ್ನಡ ದುನಿಯಾ       Mobile App
       

Kannada Duniya

‘ಇನ್ ಕ್ರೆಡಿಬಲ್ ಇಂಡಿಯಾ’ ಜಾಹೀರಾತಿನಲ್ಲಿ ಮೋದಿ

Durban: Prime Minister Narendra Modi addresses a gathering during the Civic Reception jointly by High Commissioner and the Mayor of Durban in Durban, South Africa on Saturday. PTI Photo by Kamal Singh(PTI7_9_2016_000255B)

ಪ್ರವಾಸೋದ್ಯಮ ಇಲಾಖೆಯ ‘ಇನ್ ಕ್ರೆಡಿಬಲ್ ಇಂಡಿಯಾ’ ಕ್ಯಾಂಪೇನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಣಿಸಿಕೊಳ್ಳಲಿದ್ದಾರೆ. ಅಮೀರ್ ಖಾನ್ ಅವರನ್ನು ಕೈಬಿಟ್ಟ ನಂತರ ಖಾಲಿಯಾಗಿದ್ದ ಜಾಗಕ್ಕೆ ಅಮಿತಾಬ್ ಬಚ್ಚನ್ ಅವರನ್ನು ಕರೆತರಲು ಇಲಾಖೆ ಮುಂದಾಗಿತ್ತು.

ಆದ್ರೀಗ ಮೋದಿ ಅವರು ಕಳೆದ ಎರಡೂವರೆ ವರ್ಷಗಳಲ್ಲಿ ವಿದೇಶಗಳಲ್ಲಿ ಮಾಡಿದ ಭಾಷಣಗಳಲ್ಲಿ ಭಾರತದ ಪ್ರವಾಸೋದ್ಯಮಗಳ ಬಗ್ಗೆ ಆಡಿದ ಮಾತುಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ವಿಶೇಷ ಕ್ಯಾಂಪೇನ್ ಇದಾಗಿದೆ.

ಭಾರತದಲ್ಲಿ ನವೆಂಬರ್ ಅಂತ್ಯದಿಂದ ಪ್ರವಾಸೋದ್ಯಮ ಋತು ಆರಂಭವಾಗುತ್ತಿದ್ದು, ಇನ್ನು 40-45 ದಿನಗಳೊಳಗೆ ಹೊಸ ಜಾಹೀರಾತನ್ನು ಬಿಡುಗಡೆ ಮಾಡಲಾಗುತ್ತದೆ. ಮೋದಿ ಈ ಜಾಹೀರಾತಿ ಹೇಳಿ ಮಾಡಿಸಿದಂತಹ ವ್ಯಕ್ತಿ, ಯಾಕಂದ್ರೆ ಅವರು ಭೇಟಿಕೊಟ್ಟ ರಾಷ್ಟ್ರಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ ಅಂತಾ ಸಚಿವ ಮಹೇಶ್ ಶರ್ಮಾ ತಿಳಿಸಿದ್ದಾರೆ. ಭಾರತೀಯ ಪ್ರವಾಸೋದ್ಯಮದ ಬ್ರಾಂಡ್ ಅಂಬಾಸಿಡರ್ ಆಗಿದ್ದ ಅಮೀರ್ ಖಾನ್ ರನ್ನು ಕೈಬಿಟ್ಟ ಮೇಲೆ ಅಮಿತಾಭ್ ಬಚ್ಚನ್ ಮತ್ತು ಪ್ರಿಯಾಂಕಾ ಚೋಪ್ರಾ ಹೆಸರು ಕೇಳಿಬಂದಿತ್ತು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...