alex Certify
ಕನ್ನಡ ದುನಿಯಾ       Mobile App
       

Kannada Duniya

ಬಜೆಟ್ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು…?

ಬಜೆಟ್ ಮಂಡನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡಿಸಿರುವುದಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಅಭಿನಂದಿಸಿದ್ದಾರೆ.

ಆಹಾರ ಸಂಸ್ಕರಣೆಯಿಂದ ಆಪ್ಟಿಕಲ್ ಫೈಬರ್ ವರೆಗೆ ಗ್ರಾಮೀಣ ಭಾಗದ ರೈತರಿಂದ ಉದ್ಯಮದಾರರವರೆಗೆ, ಹೀಗೆ ಎಲ್ಲರ ಆಶಯವನ್ನು ಬಜೆಟ್ ಈಡೇರಿಸಿದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ. ಬಜೆಟ್ ನಲ್ಲಿರುವ ಪ್ರತಿ ಯೋಜನೆಯನ್ನೂ ಮೋದಿ ಮನಮುಟ್ಟುವಂತೆ ವಿವರಿಸಿದ್ರು. ದಲಿತರು, ಶೋಷಿತರು ಮತ್ತು ಹಿಂದುಳಿದವರ ಅಭಿವೃದ್ಧಿಗೆ ಒತ್ತು ನೀಡಿರೋದಾಗಿ ತಿಳಿಸಿದ್ದಾರೆ.

ದೇಶದ ಪ್ರಗತಿಗೆ ಪೂರಕ ಬಜೆಟ್ ಅನ್ನೋದು ಮೋದಿ ಅವರ ಮಾತು. ಬಡವರು ಮಧ್ಯಮ ವರ್ಗದವರಿಗೆ ಆರೋಗ್ಯ ಯೋಜನೆ, ಮಧ್ಯಮ ವರ್ಗದವರಿಗೆ ಹೆಚ್ಚಿನ ಉಳಿತಾಯಕ್ಕೆ ಅವಕಾಶ, ಯುವಕರಿಗೆ ಹೊಸ ಉದ್ಯೋಗ ಸೃಷ್ಟಿ, ರೈತರ ಬೆಳೆಗಳಿಗೆ ಶೇ.1.5 ರಷ್ಟು ಹೆಚ್ಚಿನ ಬೆಲೆ ಹೀಗೆ ವಿವಿಧ ಅಂಶಗಳನ್ನು ಹೊಂದಿರುವ ಈ ಬಜೆಟ್ 21 ಶತಮಾನಕ್ಕೆ ಸಾಗಲು ಸೂಕ್ತವಾಗಿದೆ ಅಂತಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...