alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಮಾಡಿದ ಭಾಷಣ ಕೇಳಿ ಗುಂಡು ಪ್ರಿಯರಿಗೆ ಟೆನ್ಷನ್

ವೀಕೆಂಡ್ ಬಂತು ಅಂದ್ರೆ ಸಾಕು ಪಾರ್ಟಿ, ಗುಂಡು, ತುಂಡು ಅಂತಾ ಮಜಾ ಮಾಡೋರೆ ಜಾಸ್ತಿ. ಆದ್ರೆ ಈ ಬಾರಿ ಮಾತ್ರ ಟ್ವಿಟ್ಟರ್ ಬಳಕೆದಾರರು ವೀಕೆಂಡ್ ಗುಂಡು ಪಾರ್ಟಿ ಮಾಡೋದೋ ಬೇಡ್ವೋ ಅನ್ನೋ ಗೊಂದಲದಲ್ಲಿದ್ದಾರೆ. ಇದಕ್ಕೆ ಕಾರಣ ಮದ್ಯಪಾನದ ಕುರಿತು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಬಿಚ್ಚಿಟ್ಟ ವಿವರ.

ಹರಿದ್ವಾರದಲ್ಲಿ ಮಾತನಾಡಿದ ಮೋದಿ, ಯುವಜನತೆ ಕುಡಿತಕ್ಕೆ ದಾಸರಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಇದನ್ನು ಈಗಲೇ ತಡೆಯದಿದ್ದರೆ ಇನ್ನು 25 ವರ್ಷಗಳಲ್ಲಿ ಸಮಾಜದ ಸ್ವಾಸ್ಥ್ಯ ಸಂಪೂರ್ಣ ಹಾಳಾಗಲಿದೆ ಅಂತಾ ಎಚ್ಚರಿಕೆ ನೀಡಿದ್ದರು.

ಮದ್ಯಪಾನ ತಡೆಯುವುದು ಮತ್ತು ಅದರಿಂದಾಗುವ ಕೆಟ್ಟ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಉಮಿಯಾ ಸಂಸ್ಥಾನವನ್ನು ಶ್ಲಾಘಿಸಿದ್ದರು. ಈ ಭಾಷಣದ ಮೂಲಕ ಮೋದಿ ದೇಶದಲ್ಲಿ ಮದ್ಯಪಾನ ನಿಷೇಧ ಮಾಡುವ ಸುಳಿವನ್ನೇನಾದ್ರೂ ನೀಡಿದ್ದಾರಾ ಅನ್ನೋದು ಹಲವರ ಅನುಮಾನ.

ನೋಟು ನಿಷೇಧದ ಘೋಷಣೆಗೂ ಮುನ್ನ ಪ್ರಧಾನಿ ಕಪ್ಪುಹಣದ ಬಗ್ಗೆ ಪ್ರಸ್ತಾಪ ಮಾಡಿದ್ರು. ಅದೇ ರೀತಿ ಮದ್ಯಪ್ರಿಯರಿಗೂ ಶಾಕ್ ಕೊಡಲಿದ್ದಾರಾ ಅನ್ನೋ ಚಿಂತೆ ಹಲವರನ್ನು ಕಾಡಲಾರಂಭಿಸಿದೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ತರಹೇವಾರಿ ಕಮೆಂಟ್ ಗಳು ಕೂಡ ಹರಿದಾಡುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...