alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರೇಟ್ ಪ್ರಧಾನಿ ಮೋದಿ, ಗ್ರೇಟ್ ಸಿಎಂ ಯೋಗಿ ಇದ್ದರೂ ಶ್ರೀ ರಾಮನಿಗೆ ಟೆಂಟ್ ವಾಸ ತಪ್ಪಲಿಲ್ಲವೆಂದ ಬಿಜೆಪಿ ನಾಯಕ

ಪ್ರಧಾನಿ ಮೋದಿ ಆಗಿದ್ದರೂ, ಸಿಎಂ ಯೋಗಿಯಾದರೂ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಟೆಂಟ್ ವಾಸ ತಪ್ಪಲಿಲ್ಲ. ಹೀಗಂತ ಬಿಜೆಪಿ ನಾಯಕರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ಉತ್ತರ ಪ್ರದೇಶದ ಬಲಿಯಾ ಕ್ಷೇತ್ರದ ನಾಯಕ ಸುರೇಂದ್ರ ಸಿಂಗ್ ಈ ರೀತಿ ಅಸಮಾಧಾನ ಹೊರಹಾಕಿದ್ದು, ಪವರ್ ಫುಲ್ ಸ್ಥಾನದಲ್ಲಿದ್ದರೂ ಮೋದಿ ಮತ್ತು ಯೋಗಿ ಮಂದಿರ ನಿರ್ಮಾಣಕ್ಕೆ ಆಸಕ್ತಿ ವಹಿಸಿಲ್ಲ ಎಂದು ಬೇಸರಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಗ್ರೇಟ್ ಪ್ರಧಾನಿ ನರೇಂದ್ರ ಮೋದಿ, ಗ್ರೇಟ್ ಸಿಎಂ ಯೋಗಿಯವರನ್ನು ಹೊಂದಿದ್ದೇವೆ.‌ ಅವರಿಬ್ಬರೂ ಹಿಂದೂ ಧರ್ಮವನ್ನು ನಂಬಿಕೆಯುಳ್ಳ ನಾಯಕರೇ. ಆದರೆ ಇವರಿಬ್ಬರ ಆಡಳಿತದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಟೆಂಟೇ ಗತಿ. ಇದು ಭಾರತ ಮತ್ತು ಹಿಂದೂ ಸಮಾಜದ ದುರಂತ ಎಂದು ವಿಶ್ಲೇಷಿಸಿದ್ದಾರೆ. ಸಂವಿಧಾನಕ್ಕಿಂತ ದೇವರು ದೊಡ್ಡವನು, ಮಂದಿರ ನಿರ್ಮಾಣಕ್ಕೆ ತಡ ಮಾಡಕೂಡದು. ಅಯೋಧ್ಯೆಯಲ್ಲೇ ಮಂದಿರ ನಿರ್ಮಾಣ ಆಗಬೇಕು ಎಂದರು.

ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ದಿನೇಶ್ ಶರ್ಮ ನವೆಂಬರ್ 12ರಂದು ಹೇಳಿಕೆ ನೀಡಿ, ಶ್ರೀರಾಮ ಬಯಸಿದರೆ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣವಾಗಲಿದೆ ಎಂದಿದ್ದರು. ಈ ಹೇಳಿಕೆಗೆ ಬಿಜೆಪಿಯಲ್ಲಿ ಟೀಕೆ ವ್ಯಕ್ತವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...