alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಸರಿನಲ್ಲೇ ಕಮಲ ಅರಳೋದು: ನರೇಂದ್ರ ಮೋದಿ

ಗುಜರಾತ್ ವಿಧಾನಸಭಾ ಚುನಾವಣಾ ಕಣ ರಂಗೇರಿದೆ. ಇಂದಿನಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಚಾರ ಕಣಕ್ಕೆ ಧುಮುಕಿದ್ದಾರೆ. ಗುಜರಾತ್ ಪ್ರವಾಸ ಕೈಗೊಂಡಿರುವ ಮೋದಿ ಮೊದಲು ಆಶಾಪುರ ದೇವಿ ದರ್ಶನ ಪಡೆದ್ರು.

ಭುಜ್ ನಲ್ಲಿ ಜನರ ಕೈ ಕುಲುಕಿ ಮಾತನಾಡಿದ ಮೋದಿ, ಕಾಂಗ್ರೆಸ್ ಗೆ ಧನ್ಯವಾದ ಹೇಳಿದ್ರು. ಕಾಂಗ್ರೆಸ್ ಜನರನ್ನು ಗೊಂದಲಕ್ಕೀಡು ಮಾಡಿದೆ. ನಮ್ಮ ಮೇಲೆ ಕೆಸರೆರಚಿದೆ. ಕೆಸರಿನಲ್ಲಿಯೇ ಕಮಲ ಅರಳುವುದು ಎಂದು ಮೋದಿ ಹೇಳಿದ್ದಾರೆ. ಭುಜ್ ನಂತ್ರ ಗುಜರಾತ್ ನಲ್ಲಿ ಮೋದಿ ಮೂರ್ನಾಲ್ಕು ರ್ಯಾಲಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಭುಜ್ ಪ್ರಚಾರದ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಮೋದಿ, ಗುಜರಾತ್ ಜನರು ಎಂದೂ ಕಾಂಗ್ರೆಸನ್ನು ಕ್ಷಮಿಸುವುದಿಲ್ಲ. ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡಿದೆ ಎಂದು ಗುಡುಗಿದ್ರು. ಗುಜರಾತಿನ ಮೂಲೆ ಮೂಲೆಗೆ ಹೋಗಿ ಮತ ಕೇಳುತ್ತೇನೆಂದು ಮೋದಿ ಹೇಳಿದ್ರು.

ಪ್ರಚಾರ ಕಾರ್ಯಕ್ಕೆ ಧುಮುಕುವ ಮುನ್ನವೇ ಮೋದಿ ತಮ್ಮ ಪ್ರಚಾರದ ಪಟ್ಟಿಯನ್ನು ಟ್ವಿಟ್ ಮಾಡಿದ್ದಾರೆ. ಭುಜ್ ನಿಂದ ರ್ಯಾಲಿ ಆರಂಭ ಮಾಡಲಿದ್ದೇನೆಂದು ಮೋದಿ ಟ್ವಿಟರ್ ನಲ್ಲಿ ಮೊದಲೇ ಮಾಹಿತಿ ನೀಡಿದ್ದರು. ಡಿಸೆಂಬರ್ 9 ಮತ್ತು 14ರಂದು ಗುಜರಾತ್ ವಿಧಾನಸಭೆಗೆ ಮತದಾನ ನಡೆಯಲಿದ್ದು, ನವೆಂಬರ್ 29ರವರೆಗೆ ಮೋದಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...