alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಸರ್ಕಾರದಲ್ಲಿ ಭಾರೀ ಬದಲಾವಣೆ

ಮತ್ತೊಮ್ಮೆ ಪಿಎಂ ಮೋದಿ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗಿದೆ. ಮೂಲಗಳ ಪ್ರಕಾರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಐಬಿ ಸಚಿವೆ ಸ್ಮೃತಿ ಇರಾನಿ ಖಾತೆಯಲ್ಲಿ ಬದಲಾವಣೆಯಾಗಿದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಜೇಟ್ಲಿ ವಿತ್ತ ಖಾತೆ ಹೊಣೆ ತಾತ್ಕಾಲಿಕವಾಗಿ ಪಿಯುಶ್ ಗೋಯಲ್ ಹೆಗಲಿಗೇರಿದೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿಯಿಂದ ಮಾಹಿತಿ ಮತ್ತು ಪ್ರಸಾರ ಖಾತೆಯನ್ನು ಹಿಂಪಡೆಯಲಾಗಿದೆ. ರಾಜ್ಯ ಸಚಿವ ರಾಜವರ್ಧನ್ ಸಿಂಗ್ ಹೆಗಲಿಗೆ ಮಾಹಿತಿ ಮತ್ತು ಪ್ರಸಾರದ ಹೊಣೆ ಬಿದ್ದಿದೆ. ಅರುಣ್ ಜೇಟ್ಲಿ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸೋಮವಾರವಷ್ಟೇ ಜೇಟ್ಲಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆದಿದೆ. ಜೇಟ್ಲಿ ವಿಶ್ರಾಂತಿಯಿಂದಾಗಿ ಕೆಲಸ ಹಿಂದೆ ಬಿದ್ದಿದೆ. ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೋದಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ.

ಜೇಟ್ಲಿ ಆರೋಗ್ಯದಲ್ಲಿ ಸುಧಾರಣೆಯಾಗುವವರೆಗೂ ಪಿಯುಶ್ ಗೋಯಲ್ ವಿತ್ತ ಖಾತೆ ನೋಡಿಕೊಳ್ಳಲಿದ್ದಾರೆ. ಜೇಟ್ಲಿ ವಿಚಾರ ವಿಶೇಷವಾದದ್ದಲ್ಲ. ಆದ್ರೆ ಸ್ಮೃತಿ ಇರಾನಿಯಿಂದ ಐಬಿ ಖಾತೆ ಕಿತ್ತುಕೊಂಡಿರುವುದು ಮಹತ್ವದ ತೀರ್ಮಾನ ಎನ್ನಲಾಗ್ತಿದೆ. ಈ ಹಿಂದೆ ಮಾನವ ಸಂಪನ್ಮೂಲ ಖಾತೆಯನ್ನು ಸ್ಮೃತಿಯಿಂದ ಕಿತ್ತುಕೊಳ್ಳಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...