alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಇರಲ್ಲ ನಕಲಿ ರೇಷನ್ ಕಾರ್ಡ್ ಹಾವಳಿ

ಸಾಮಾನ್ಯ ಜನರಿಗಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರ್ತಿದೆ. ಇದ್ರ ಜೊತೆಗೆ ಹಳೆ ವ್ಯವಸ್ಥೆಯನ್ನು ಬದಲಾಯಿಸುವ ಕೆಲಸವನ್ನೂ ಮಾಡಲಾಗ್ತಿದೆ. ಇದೇ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇನ್ನೊಂದು ಮಹತ್ವದ ಹೆಜ್ಜೆ ಇಡುತ್ತಿದೆ.

ಮೋದಿ ಸರ್ಕಾರ ಹೊಸದೊಂದು ಯೋಜನೆ ಶುರು ಮಾಡ್ತಿದೆ. ಇದ್ರ ಅಡಿ ದೇಶದಾದ್ಯಂತ ಒಂದೇ ರೇಷನ್ ಕಾರ್ಡ್ ಬಳಸಬಹುದಾಗಿದೆ. ಸರ್ಕಾರ ಆಧಾರ್ ನಂಬರ್ ನಂತೆಯೇ ರೇಷನ್ ಕಾರ್ಡ್ ಗೆ ಒಂದು ಪ್ರತ್ಯೇಕ ಗುರುತಿನ ಸಂಖ್ಯೆ ನೀಡಲು ಸಿದ್ಧವಾಗಿದೆ.  ಇದು ನಕಲಿ ರೇಷನ್ ಕಾರ್ಡ್ ಅಬ್ಬರಕ್ಕೆ ಫುಲ್ ಸ್ಟಾಪ್ ನೀಡಲಿದೆ.

ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ವ್ಯಕ್ತಿ ನಕಲಿ ರೇಷನ್ ಕಾರ್ಡ್ ತಯಾರಿಸಿದ್ರೂ ಇದು ಪತ್ತೆ ಮಾಡಲಿದೆ. ಇದ್ರ ಇನ್ನೊಂದು ಲಾಭವೆಂದ್ರೆ ಫಲಾನುಭವಿ ದೇಶದ ಯಾವುದೇ ರೇಷನ್ ಅಂಗಡಿಯಲ್ಲಿ ಬೇಕಾದ್ರೂ ರೇಷನ್ ಪಡೆಯಬಹುದಾಗಿದೆ. ಮುಂದಿನ ತಿಂಗಳಿನಿಂದ ಇದ್ರ ಕೆಲಸ ಶುರುವಾಗಲಿದೆ.

ಆನ್ಲೈನ್ ನೆಟ್ವರ್ಕ್ ತಯಾರಾದ ನಂತ್ರ ಯಾವುದೇ ನೌಕರ ಬೇರೆ ರಾಜ್ಯಕ್ಕೆ ವರ್ಗವಾದ್ರೂ ರೇಷನ್ ಬಗ್ಗೆ ಚಿಂತೆಪಡುವ ಅಗತ್ಯವಿರುವುದಿಲ್ಲ. ಗುರುತಿನ ಸಂಖ್ಯೆ ತೋರಿಸಿ ರೇಷನ್ ಖರೀದಿ ಮಾಡಬಹುದು. ಪ್ರಸ್ತುತ ದೇಶದ ನಾಲ್ಕು ರಾಜ್ಯಗಳಲ್ಲಿ ಮಾತ್ರ ಒಂದು ರಾಜ್ಯದ ನೌಕರ ಇನ್ನೊಂದು ರಾಜ್ಯದಲ್ಲಿ ರೇಷನ್ ಪಡೆಯುವ ವ್ಯವಸ್ಥೆಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...