alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಖರೀದಿ ಕನಸು ಕಾಣ್ತಿರುವವರಿಗೆ ಮೋದಿ ಸರ್ಕಾರದಿಂದ “ಗುಡ್ ನ್ಯೂಸ್”…?

ಸ್ವಂತಕ್ಕೊಂದು ಮನೆ ಬೇಕು ಎಂಬುದು ಎಲ್ಲರ ಕನಸು. ಆದ್ರೆ ಇದು ಸುಲಭವಾಗಿ ಈಡೇರುವಂತಹದ್ದಲ್ಲ. ನರೇಂದ್ರ ಮೋದಿ ಸರ್ಕಾರ ಈಗಾಗಲೇ ಅನೇಕರ ಕನಸನ್ನು ನನಸು ಮಾಡಿದೆ. ಈವರೆಗೂ ಮನೆ ಖರೀದಿ ಮಾಡದೆಯಿರುವವರಿಗೊಂದು ಗುಡ್ ನ್ಯೂಸ್ ಇಲ್ಲಿದೆ.

ಮೋದಿ ಸರ್ಕಾರ, ಫ್ಲಾಟ್ ಅಥವಾ ಮನೆ ನಿರ್ಮಾಣಕ್ಕೆ ಸಬ್ಸಿಡಿ ನೀಡುವ ಯೋಜನೆಯನ್ನು ಈಗಾಗಲೇ ಶುರು ಮಾಡಿದೆ. ಇದಕ್ಕೆ ದೇಶವಾಸಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಬೇರೆ ಬೇರೆ ಆದಾಯ ಬರುವ ಗುಂಪಿಗೆ ಬೇರೆ ಬೇರೆ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ನೀಡ್ತಿದೆ. ಯೋಜನೆಯಡಿ ಸರ್ಕಾರ ಈವರೆಗೆ 2.67 ಲಕ್ಷದವರೆಗೆ ಸಬ್ಸಿಡಿ ನೀಡ್ತಿದೆ.

2016 ರಲ್ಲಿ ಶುರುವಾದ ಪ್ರಧಾನ ಮಂತ್ರಿ ವಸತಿ ಯೋಜನೆ 2019, ಮಾರ್ಚ್ ಗೆ ಕೊನೆಗೊಳ್ಳಲಿದೆ. ಆದ್ರೆ ಮೋದಿ ಸರ್ಕಾರ ಯೋಜನೆಯನ್ನು ವಿಸ್ತರಿಸುವ ಯೋಚನೆಯಲ್ಲಿದೆ. ಯೋಜನೆಯನ್ನು 2022 ರವರೆಗೆ ವಿಸ್ತರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಒಂದು ವೇಳೆ ಸರ್ಕಾರ ಯೋಜನೆಯನ್ನು ವಿಸ್ತರಿಸಿದ್ರೆ ಈವರೆಗೆ ಮನೆ ಖರೀದಿಸದವರಿಗೆ ಇನ್ನೊಂದು ಅವಕಾಶ ಸಿಗಲಿದೆ. ಸರ್ಕಾರ ಸಬ್ಸಿಡಿ ನೀಡಿದ ಮೇಲೆ ಮನೆ ಸಾಲದ ಕಂತು 2000 ದಿಂದ 2200 ರವರೆಗೆ ಇಳಿಕೆಯಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...