alex Certify
ಕನ್ನಡ ದುನಿಯಾ       Mobile App
       

Kannada Duniya

ಫೋನ್ ನಲ್ಲಿ 500 ರೂ. ಬ್ಯಾಲೆನ್ಸ್ ನೀಡ್ತಿದ್ದಾರೆ ಮೋದಿ?

yem-8

ವಾಟ್ಸ್ ಅಪ್ ನಲ್ಲಿ ಪ್ರಧಾನ ಮಂತ್ರಿ ಮೋದಿಯವರ ಬಗ್ಗೆ ಬಿಸಿಬಿಸಿ ಗಾಳಿ ಸುದ್ದಿಯೊಂದು ಹರಿದಾಡ್ತಾ ಇದೆ. ನಗದು ರಹಿತ ವ್ಯವಹಾರಕ್ಕೆ ಪ್ರೋತ್ಸಾಹ ನೀಡ್ತಾ ಇರುವ ಪ್ರಧಾನ ಮಂತ್ರಿ ಮೋದಿ, ಪ್ರತಿಯೊಬ್ಬರ ಮೊಬೈಲ್ ಗೆ 500 ರೂಪಾಯಿ ಬ್ಯಾಲೆನ್ಸ್ ಉಚಿತವಾಗಿ ನೀಡ್ತಿದ್ದಾರೆ ಎಂಬ ಸುದ್ದಿ ಹರಿದಾಡ್ತಾ ಇದೆ.

ಸಂದೇಶದ ಜೊತೆ ಲಿಂಕ್ ಒಂದನ್ನು ಕಳುಹಿಸಲಾಗಿದೆ. ಇದಕ್ಕೆ ಕ್ಲಿಕ್ ಮಾಡಿದ್ರೆ ಟೆಲಿಕಾಂ ಕಂಪನಿಗಳ ಲೋಗೋ ಇದೆ. ನಿಮ್ಮ ವಿವರ ನೀಡುವಂತೆ ಅಲ್ಲಿ ಹೇಳಲಾಗಿದೆ. ವಿವರ ನೀಡಿ ಎಂಟರ್ ಕೊಟ್ಟ ನಂತ್ರ ರಿಚಾರ್ಜ್ ಮಾಡುವ ಹಣವೆಷ್ಟೆಂದು ನಮೂದಿಸಬೇಕು. ನಂತ್ರ ರಿಚಾರ್ಜ್ ಮಾಡಲು ಸೂಚಿಸಲಾಗುತ್ತದೆ.

ಪೇಜನ್ನು ಸೂಕ್ಷ್ಮವಾಗಿ ನೋಡಿದವರಿಗೆ ಇದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಲಿದೆ. ಸಣ್ಣದಾಗಿ ಟರ್ಮ್ಸ್ ಅಂಡ್ ಕಂಡೀಷನ್ ಎಂದು ಬರೆಯಲಾಗಿದೆ. ವ್ಯಾಕರಣದಲ್ಲಿ ಸಾಕಷ್ಟು ತಪ್ಪುಗಳಿವೆ. ಯಾವುದೇ ಟೆಲಿಕಾಂ ಕಂಪನಿಗಳ ಜೊತೆ ಸಂಪರ್ಕ ಹೊಂದಿಲ್ಲ ಎಂದೂ ಬರೆಯಲಾಗಿದೆ. ಇದೊಂದು ಸುಳ್ಳು ವೆಬ್ ಸೈಟ್ ಆಗಿದ್ದು, ನೀವು ಇಲ್ಲಿ ನೀಡುವ ಮಾಹಿತಿ ಬೇರೊಂದು ಸೈಟ್ ಗೆ ವರ್ಗಾವಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಹಾಗಾಗಿ ಈ ವೆಬ್ ಸೈಟ್ ಕ್ಲಿಕ್ ಮಾಡದೆ ಇರುವುದೇ ಸೂಕ್ತ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...