alex Certify
ಕನ್ನಡ ದುನಿಯಾ       Mobile App
       

Kannada Duniya

ಹೇಗಿತ್ತು ಗೊತ್ತಾ ಮೋದಿ, ಶಾ ಕಾರ್ಯತಂತ್ರ..?

sha-modi

ನವದೆಹಲಿ: ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ನರೇಂದ್ರ ಮೋದಿ ಮತ್ತು ಅಮಿತ್ ಶಾ ಮತದಾರರ ನಾಡಿ ಮಿಡಿತ ಅರಿಯುವಲ್ಲಿ ಯಶಸ್ವಿಯಾಗಿದ್ದರು.

ವಿಧಾನಸಭೆ ಚುನಾವಣೆಯ ಆರಂಭದಲ್ಲಿಯೇ ಮೋದಿ, ಶಾ ಜೋಡಿ ಕಾರ್ಯತಂತ್ರ ರೂಪಿಸಿತ್ತು. ಟಿಕೆಟ್ ಹಂಚಿಕೆಯಿಂದ ಹಿಡಿದು, ಪ್ರಚಾರ, ಮತದಾರರ ಭೇಟಿ ಹೀಗೆ ಎಲ್ಲಾ ಹಂತಗಳಲ್ಲಿಯೂ ಗೆಲುವಿಗೆ ಅಗತ್ಯವಾದ ಕಾರ್ಯತಂತ್ರ ರೂಪಿಸಲಾಗಿತ್ತು.

ಬಿ.ಜೆ.ಪಿ. ಟಿಕೆಟ್ ನೀಡುವಾಗಲೂ ಎಲ್ಲಾ ಲೆಕ್ಕಾಚಾರ ಮಾಡಲಾಗಿತ್ತು. ಖಾಸಗಿ ಸಂಸ್ಥೆಗಳ ಮೂಲಕ ಸಮೀಕ್ಷೆ ನಡೆಸಿ, ಗೆಲ್ಲುವ ಅಭ್ಯರ್ಥಿಗಳ ಆಯ್ಕೆ ಮಾಡಿ ಟಿಕೆಟ್ ನೀಡಲಾಗಿತ್ತು.

ಪ್ರಚಾರದಲ್ಲಿಯೂ ಅಷ್ಟೇ. ಮೋದಿ ಮತ್ತು ಶಾ ಅವರು ವಿಭಿನ್ನ ಕಾರ್ಯ ತಂತ್ರ ರೂಪಿಸಿದ್ದರು. ಮೋದಿ ಗಲ್ಲಿ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂಬ ಟೀಕೆ ವ್ಯಕ್ತವಾದರೂ ತಲೆಕೆಡಿಸಿಕೊಳ್ಳದೇ, ‘ಚಾಣಕ್ಯ’ನ ಕಾರ್ಯತಂತ್ರ ರೂಪಿಸಿದ ಮೋದಿ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಉತ್ತರ ಪ್ರದೇಶದಲ್ಲಿ ಬಿ.ಜೆ.ಪಿ.ಯನ್ನು ಅಧಿಕಾರಕ್ಕೆ ತಂದಿದ್ದಾರೆ.

2 ಹಂತಗಳ ಚುನಾವಣೆ ಮುಗಿದಾಗಲೇ ಅಮಿತ್ ಶಾ, ಬಿ.ಜೆ.ಪಿ. ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಅಷ್ಟು ಭರವಸೆ ಅವರಿಗೆ ಇತ್ತು.

ಈ ಮೂಲಕ ಉತ್ತರ ಪ್ರದೇಶ ಚುನಾವಣೆಯಲ್ಲಿ ಮೋದಿ ಮತ್ತು ಅಮಿತ್ ಶಾ ‘ಮ್ಯಾನ್ ಆಫ್ ದಿ ಮ್ಯಾಚ್’ ಆಗಿದ್ದಾರೆ. ದೊಡ್ಡ ರಾಜ್ಯದ ಚುಕ್ಕಾಣಿ ಹಿಡಿಯುವಲ್ಲಿ ಬಿ.ಜೆ.ಪಿ. ಯಶಸ್ವಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...