alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳದತ್ತ ಮೋದಿ ಟೀಂ ಚಿತ್ತ

amit_shah_1492489621_749x421

2014ರ ಲೋಕಸಭಾ ಚುನಾವಣೆ ಗೆದ್ದ ನಂತ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದ ಟೀಂ ಅನೇಕ ರಾಜ್ಯಗಳಲ್ಲಿ ಬಿಜೆಪಿಯ ಧ್ವಜವನ್ನೂರಿದೆ. ಬಹು ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಟೀಂ ಸುಮ್ಮನೆ ಕುಳಿತಿಲ್ಲ. ಗೆಲುವಿನ ನಗೆಯಲ್ಲಿಯೇ ಬಿಜೆಪಿ ಪ್ರಭಾವ ಕಡಿಮೆ ಇರುವ ರಾಜ್ಯಗಳತ್ತ ತನ್ನ ಗಮನ ಹರಿಸಿದೆ. ಇದ್ರಲ್ಲಿ ಕೇರಳ ಕೂಡ ಒಂದು.

ಭುವನೇಶ್ವರದಲ್ಲಿ ನಡೆದ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮೋದಿ ಹಾಗೂ ಅಮಿತ್ ಶಾ ಪದೇ ಪದೇ ಕೇರಳದ ಬಗ್ಗೆ ಮಾತನಾಡಿದ್ದಾರೆ. ಕೇರಳದಲ್ಲಿ ತನ್ನ ಬಲ ಹೆಚ್ಚಿಸಲು ಬಿಜೆಪಿ ರಣತಂತ್ರ ರೂಪಿಸ್ತಾ ಇದೆ. ಬಿಜೆಪಿ ದುರ್ಬಲವಾಗಿರುವ ರಾಜ್ಯಗಳೇ ಮುಂದಿನ ಗುರಿ ಎಂದು ನಾಯಕರಿಗೆ ಸಂದೇಶ ರವಾನೆ ಮಾಡಲಾಗಿದೆ.

ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ಹೋಗಿ ಪಕ್ಷದ ಪ್ರಚಾರ ನಡೆಸಬೇಕು. ಜೊತೆಗೆ ಕೇರಳದ ಸಮಸ್ಯೆಗಳನ್ನು ಜನರ ಮುಂದಿಡಬೇಕೆಂದು ನಾಯಕರಿಗೆ ಸಂದೇಶ ರವಾನೆ ಮಾಡಲಾಗಿದೆ. ಕೇರಳದಲ್ಲಿ ಆರ್ ಎಸ್ ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ಹೆಚ್ಚಾಗಿದೆ. ಹಾಗಾಗಿ ಮನೆ ಮನೆಗೆ ಹೋಗಿ ಪ್ರಚಾರ ಮಾಡುವಂತೆ ಸೂಚನೆ ನೀಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...