alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ-ಷಾ ಮುಂದಿದೆ 429 ಸೀಟಿನ ಚಕ್ರವ್ಯೂಹ

ಕರ್ನಾಟಕದಲ್ಲಿ ಸಿಕ್ಕ ಗೆಲುವು ವಿರೋಧಿ ಪಕ್ಷಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಇದೇ ಉತ್ಸಾಹದಲ್ಲಿ 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ವಿಜಯ ರಥಕ್ಕೆ ತಡೆಯೊಡ್ಡಲು ಹೊಸ ಫಾರ್ಮುಲಾ ಸಿದ್ಧಪಡಿಸಿವೆ. 13 ರಾಜ್ಯಗಳ 15 ಪಕ್ಷಗಳು ಒಂದಾಗಿ ಮೋದಿ, ಅಮಿತ್ ಷಾ ವಿರುದ್ಧ ಹೋರಾಟ ನಡೆಸಲು ತಯಾರಾಗ್ತಿವೆ.

20 ರಾಜ್ಯಗಳಲ್ಲಿ ತಮ್ಮ ಧ್ವಜ ನೆಟ್ಟಿರುವ ಮೋದಿ-ಷಾ ಜೋಡಿಗೆ ಹೊಡೆತ ನೀಡುವುದು ವಿಪಕ್ಷಗಳ ಪ್ಲಾನ್ ಆಗಿದೆ. ಒಂದಾಗಿ ಆಕ್ರಮಣ ಮಾಡಿದ್ರೆ ಮೋದಿ-ಷಾರನ್ನು ಬಗ್ಗು ಬಡಿಯಬಹುದು ಎಂಬುದು ವಿಪಕ್ಷಗಳ ಆಲೋಚನೆಯಾಗಿದೆ.

ಕರ್ನಾಟಕದಲ್ಲಿ ಬಿಜೆಪಿ ಬಹುಮತ ಗಳಿಸಲಿಲ್ಲ. ಇದನ್ನೇ ಕಾಂಗ್ರೆಸ್-ಜೆಡಿಎಸ್ ಬಂಡವಾಳ ಮಾಡಿಕೊಂಡು ಸರ್ಕಾರ ರಚನೆಗೆ ಮುಂದಾಗಿದೆ. ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭದಲ್ಲಿ ವಿಪಕ್ಷ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ತಮ್ಮ ತಾಕತ್ತಿನ ಪ್ರದರ್ಶನ ಮಾಡಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಗೆಲುವು ಕಂಡ ಮೋದಿಗೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಗೆಲುವು ಮತ್ತಷ್ಟು ಶಕ್ತಿ ನೀಡಿದೆ. 2019ರಲ್ಲಿ ಸುಲಭವಾಗಿ ನಾವೇ ಗೆಲುವು ಸಾಧಿಸಬಹುದೆಂದುಕೊಂಡಿದ್ದ ಮೋದಿ ತಂಡಕ್ಕೆ ಅಖಿಲೇಶ್-ಮಾಯಾವತಿ ಉಪಚುನಾವಣೆಯಲ್ಲಿ ಒಂದಾಗಿ ಶಕ್ತಿ ಪ್ರದರ್ಶಿಸಿದ್ದರು. ಇವ್ರ ಜೊತೆ ಕಾಂಗ್ರೆಸ್ ಕೈ ಜೋಡಿಸಿದ್ರೆ ವಿಪಕ್ಷದ ಬಲ ಹೆಚ್ಚಲಿದೆ.

ಬಿಹಾರ ಹಾಗೂ ಪಶ್ಚಿಮ ಬಂಗಾಳದ ಮೇಲೂ ಮೋದಿ-ಷಾ ಕಣ್ಣಿಟ್ಟಿದ್ದಾರೆ. ಕಾಂಗ್ರೆಸ್-ಆರ್ ಜೆ ಡಿ ಒಂದಾದ್ರೆ ಬಿಜೆಪಿಗೆ ಹೊಡೆತ ಬೀಳಲಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಜೊತೆ ಟಿಎಂಸಿ ಒಂದಾಗುವ ಸಾಧ್ಯತೆಯಿದೆ. ತಮಿಳುನಾಡಿನಲ್ಲಿ ಕಾಂಗ್ರೆಸ್-ಡಿಎಂಕೆ ಒಂದಾಗಿ ಬಿಜೆಪಿ-ಎಐಎಡಿಎಂಕೆ ಮೈತ್ರಿಗೆ ಹೊಡೆತ ನೀಡುವ ಸಾಧ್ಯತೆಯಿದೆ.

ಮಹಾರಾಷ್ಟ್ರದಲ್ಲೂ ಕಾಂಗ್ರೆಸ್-ಎನ್ಸಿಪಿ ಒಂದಾಗಲಿದೆ. ಈ ಬಗ್ಗೆ ಈಗಾಗಲೇ ಘೋಷಣೆಯಾಗಿದೆ. ಜಾರ್ಖಂಡದಲ್ಲಿಯೂ ಕಾಮಗ್ರೆಸ್ ಜೊತೆ ಜೆಎಂಎಂ ಕೈ ಜೋಡಿಸಿದೆ. ವಿರೋಧ ಪಕ್ಷಗಳು ಒಂದಾಗಿ ಬಿಜೆಪಿ ಮಣಿಸಲು ರಣತಂತ್ರ ರೂಪಿಸುತ್ತಿವೆ. 2019ರ ಲೋಕಸಭಾ ಚುನಾವಣೆ ಗೆಲುವು ಮೋದಿಗೆ ಸುಲಭವಾಗಿ ಧಕ್ಕುವಂತಹದ್ದಲ್ಲ. ಹಾಗಂತ ಮೋದಿ-ಷಾ ಕೈಕಟ್ಟಿ ಕುಳಿತುಕೊಳ್ಳುವವರಲ್ಲ. ಚುನಾವಣೆ ಗೆಲುವಿಗೆ ಯಾವ ತಂತ್ರ ಹೆಣೆಯುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...